ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಡಿಸೆಂಬರ್‌ ವೇಳೆಗೆ ಹಣದುಬ್ಬರ ಇಳಿಕೆ:ರಂಗರಾಜನ್ (PMEAC | RBI | Inflation | Monsoon)
Bookmark and Share Feedback Print
 
ದೇಶದಲ್ಲಿ ಮುಂಗಾರು ಮಳೆ ಉತ್ತಮವಾಗಿರುವುದರಿಂದ, ಆಹಾರ ದರಗಳಲ್ಲಿ ಇಳಿಕೆಯಾಗುವ ನಿರೀಕ್ಷೆಗಳಿದ್ದು,ಮುಂಬರುವ ಡಿಸೆಂಬರ್ ವೇಳೆಗೆ ಆಹಾರ ಹಣದುಬ್ಬರ ದರ ಶೇ.6.5ಕ್ಕೆ ಇಳಿಕೆಯಾಗಲಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮೂಲಗಳು ತಿಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಕಠಿಣ ಕ್ರಮಗಳಿಂದಾಗಿ ಮುಂಬರುವ ಡಿಸೆಂಬರ್‌ ವೇಳೆಗೆ ಆಹಾರ ಹಣದುಬ್ಬರ ದರ ಶೇ.6.5ಕ್ಕೆ ಇಳಿಕೆಯಾಗುವ ನಿರೀಕ್ಷೆಗಳಿವೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಮುಖ್ಯಸ್ಥ ಸಿ.ರಂಗರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಹಣದುಬ್ಬರ ದರ ಶೇ.8.6ಕ್ಕೆ ತಲುಪಿದೆ. ಹಣದುಬ್ಬರ ಇಳಿಕೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನವೆಂಬರ್ 2ರಂದು ನಡೆಯಲಿರುವ ಆರ್ಥಿಕ ಪರಿಷ್ಕರಣೆ ಸಂದರ್ಭದಲ್ಲಿ ಮತ್ತಷ್ಟು ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಪ್ರಸಕ್ತ ವರ್ಷದ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಐದು ಬಾರಿ ರೆಪೋ ದರಗಳನ್ನು ಹೆಚ್ಚಿಸಿದೆ. ಹಣದುಬ್ಬರ ದರ ಇಳಿಕೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಶೇ.8.62ರಷ್ಟಿದ್ದ ಹಣದುಬ್ಬರ ದರ ಅಗಸ್ಟ್ ತಿಂಗಳ ಅವಧಿಯಲ್ಲಿ ಶೇ.8.51ಕ್ಕೆ ಇಳಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ