ಕೇಂದ್ರ ವಿತ್ತಸಚಿವ ಪ್ರಣಬ್ ಮುಖರ್ಜಿಗೆ ನಿವೃತ್ತಿಯ ಚಿಂತೆ
ನವದೆಹಲಿ, ಸೋಮವಾರ, 18 ಅಕ್ಟೋಬರ್ 2010( 15:33 IST )
ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ನಿವೃತ್ತಿಯ ಬಗ್ಗೆ ಚಿಂತನೆ ನಡೆಸಿದ್ದಾರೆ. ನೂತನ ಸಂಪುಟದಲ್ಲಿ ಸ್ಥಾನಪಡೆಯುವ ಸಾಧ್ಯತೆಗಳಿಲ್ಲ. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಮುಂದಿನ ಪ್ರಧಾನಿಯಾಗುವ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸಿದ್ದ ಮುಖರ್ಜಿ, ದೇಶದ ಆರ್ಥಿಕತೆ ಎರಡಂಕಿಗೆ ತಲುಪುವ ಸಂದರ್ಭದಲ್ಲಿ ನಿವೃತ್ತಿಯನ್ನು ಘೋಷಿಸುವ ನಿರ್ಧಾರ ಸರಕಾರದ ವಲಯದಲ್ಲಿ ಆತಂಕ ಮೂಡಿಸಿದೆ.
ನನಗೆ ಇದೀಗ 75 ವರ್ಷ ವಯಸ್ಸು. ಇದಕ್ಕಿಂತ ಹೆಚ್ಚಿನ ಅವಧಿಗೆ ಸರಕಾರದಲ್ಲಿ ಸಚಿವನಾಗಿ ಮುಂದುವರಿಯುವುದು ಸಾಧ್ಯವಿಲ್ಲ ಇನ್ನು ಎಷ್ಟು ದಿನಗಳ ಕಾಲ ನಾನು ಮುಂದುವರಿಯಲು ಬಯಸುತ್ತೀರಿ ಎಂದು ಮುಖರ್ಜಿ ಹೇಳಿದ್ದಾರೆ.
ಕಳೆದ 1973ರಿಂದ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಸಚಿವರಾಗಿರುವ ಮುಖರ್ಜಿ, ರಾಹುಲ್ ಗಾಂಧಿ ಜನಪ್ರಿಯ ಯುವ ನಾಯಕರಾಗಿದ್ದಾರೆ. ಪ್ರಧಾನಮಂತ್ರಿಯಾಗುವ ಅರ್ಹತೆಯನ್ನು ಕೂಡಾ ಹೊಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.