ಇಂಜಿನಿಯರಿಂಗ್ ಮತ್ತು ಕಟ್ಟಡ ನಿರ್ಮಾಣ ದೈತ್ಯ ಸಂಸ್ಥೆಯಾದ ಲಾರ್ಸನ್ ಆಂಡ್ ಟೌಬ್ರೋ, ಎರಡನೇ ತ್ರೈಮಾಸಿಕ ಮುಕ್ತಾಯಕ್ಕೆ ಲಾಭದಲ್ಲಿ ಶೇ.32ರಷ್ಟು ಏರಿಕೆಯಾಗಿ 765 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದೆ.
ಕಳೆದ ವರ್ಷದ 2009-10ರ ಅವಧಿಯಲ್ಲಿ ನಿವ್ವಳ ಲಾಭ 580 ಕೋಟಿ ರೂಪಾಯಿಗಳಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
2010ರ ಜುಲೈ-ಸೆಪ್ಟೆಂಬರ್ ತಿಂಗಳ ತ್ರೈಮಾಸಿಕ ಅವಧಿಯಲ್ಲಿ, ಕಂಪೆನಿಯ ವಹಿವಾಟು 20,464 ಕೋಟಿ ರೂಪಾಯಿಗಳಾಗಿದೆ. ಆರ್ಥಿಕ ವರ್ಷದ ಒಟ್ಟು ಅವಧಿಯಲ್ಲಿ ವಹಿವಾಟು 1,15,393 ಕೋಟಿ ರೂಪಾಯಿಗಳಾಗಿದೆ ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಮುಂಬೈ ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ತಲಾ ಶೇರುದರ 1,969.95 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.