ವಿಮಾನ ಪ್ರಯಾಣದಲ್ಲಿ ಕೆಲ ನಿಯಮಗಳಿಂದಾಗಿ ನೀವು ತೊಂದರೆಯನ್ನು ಅನುಭವಿಸಿರಬಹುದು. ಆದರೆ ಇದೀಗ ಕೆಲ ಬದಲಾವಣೆಗಳನ್ನು ತರಲಾಗಿದ್ದು, ವಿಮಾನ ಲ್ಯಾಂಡ್ ಆದ ನಂತರ ಪ್ರಯಾಣಿಕರು ತಮ್ಮ ಸೆಲ್‌ಫೋನ್‌ಗಳಿಂದ ಕರೆ ಮಾಡಬಹುದಾಗಿದೆ ಎಂದು ವೈಮಾನಿಕ ಮೂಲಗಳು ತಿಳಿಸಿವೆ.
ವಿಮಾನಯಾನದ ಕೆಲ ನಿಯಮಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು ತಿದ್ದುಪಡಿಯನ್ನು ತಂದಿದ್ದು, ವಿಮಾನ ನಿಲುಗಡೆಯಾಗುವ ಮುನ್ನ ಲ್ಯಾಂಡ್ ಆದ ತರುವಾಯ ಪ್ರಯಾಣಿಕರು ಮೊಬೈಲ್ ಕರೆಗಳನ್ನು ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕಿಂತ ಮೊದಲು ವಿಮಾನ ನಿಲುಗಡೆಯಾಗುವ ಮುನ್ನ ಪ್ರಯಾಣಿಕರ ಕರೆಗಳಿಗೆ ನಿರ್ಭಂಧ ಹೇರಿತ್ತು. ಇದೀಗ ಲ್ಯಾಂಡ್ ಆದ ಕೆಲ ಕ್ಷಣಗಳಲ್ಲಿ ಪೋನ್ ಕರೆಗಳನ್ನು ಮಾಡಬಹುದು ಎಂದು ಆದೇಶವನ್ನು ಹೊರಡಿಸಿದೆ.
ಏತನ್ಮಧ್ಯೆ, ಕೆಟ್ಟ ಹವಾಮಾನ ಹಾಗೂ ಮಂಜಿನ ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ, ಪ್ರಯಾಣಿಕರಿಗೆ ಕರೆಗಳನ್ನು ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.