ಎಲ್ಆಂಡ್ಟಿಗೆ ಡಿಬಿ ಪವರ್ನಿಂದ 1,449 ಕೋಟಿ ರೂ ಗುತ್ತಿಗೆ
ಮುಂಬೈ, ಮಂಗಳವಾರ, 19 ಅಕ್ಟೋಬರ್ 2010( 12:58 IST )
ಇಂಜಿನಿಯರಿಂಗ್ ಮತ್ತು ಕಟ್ಟಡ ನಿರ್ಮಾಣ ದೈತ್ಯ ಸಂಸ್ಥೆಯಾದ ಲಾರ್ಸನ್ ಆಂಡ್ ಟೌಬ್ರೋ, ದೈನಿಕ್ ಭಾಸ್ಕರ್ ಪವರ್ ಕಂಪೆನಿಯಿಂದ 1,449 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಚತ್ತಿಸ್ಗಢ್ ರಾಜ್ಯದಲ್ಲಿ 2x600 ಮೆಗಾವ್ಯಾಟ್ ಜಲ ವಿದ್ಯುತ ಘಟಕ ನಿರ್ಮಾಣಕ್ಕಾಗಿ 1,449 ಕೋಟಿ ರೂಪಾಯಿಗಳ ಗುತ್ತಿಗೆ ದೊರೆತಿದೆ ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ವಿದ್ಯುತ್ ಘಟಕ ನಿರ್ಮಾಣಕ್ಕೆ ಅಗತ್ಯವಾದ, ಉಪಕರಣಗಳ ಸರಬರಾಜು ಹಾಗೂ ಮೇಲ್ವಿಚಾರಣೆ ಸೇರಿದಂತೆ ತಾಂತ್ರಿಕ ಸಲಹೆಗಳನ್ನು ನೀಡುತ್ತದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಘಟಕ ನಿರ್ಮಾಣಕ್ಕೆ 31 ತಿಂಗಳೊಳಗೆ ಪೂರ್ಣಗೊಳಿಸುವ ಗಡುವು ನೀಡಲಾಗಿದ್ದು, ಅಂತಾರಾಷ್ಟ್ರೀಯ ಕಂಪೆನಿಗಳ ಸ್ಪರ್ಧೆಯ ಮಧ್ಯೆಯು ಎಲ್ಆಂಡ್ಟಿ ಕಂಪೆನಿಗೆ ಬಿಡ್ ದೊರೆತಿದೆ.