ದೇಶದ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಸಂಸ್ಥೆ ಮೈಕ್ರೋಮ್ಯಾಕ್ಸ್, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 2500 ಕೋಟಿ ರೂಪಾಯಿಗಳ ಆದಾಯದ ಗುರಿಯನ್ನು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ 1600 ಕೋಟಿ ರೂಪಾಯಿಗಳ ಗುರಿಯನ್ನು ತಲುಪಿದೆ.ಪ್ರಸಕ್ತ ಆರ್ಥಿಕ ವರ್ಷದ ಅವಧಿಯಲ್ಲಿ 2,500 ಕೋಟಿ ರೂಪಾಯಿಗಳ ಆದಾಯದ ಗುರಿಯನ್ನು ಹೊಂದಿದೆ ಎಂದು ಮೈಕ್ರೋಮ್ಯಾಕ್ಸ್‌ನ ವಹಿವಾಟು ನಿರ್ದೇಶಕ ವಿಕಾಸ್ ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಂಪೆನಿ, ಪ್ರಸ್ತುತ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಹ್ಯಾಂಡ್‌ಸೆಟ್‌ಗಳನ್ನು ರಫ್ತು ಮಾಡುತ್ತಿದ್ದು, ಶೀಘ್ರದಲ್ಲಿ ಬ್ರೆಜಿಲ್‌ಗೆ ಹ್ಯಾಂಡ್‌ಸೆಟ್‌ಗಳನ್ನು ರಫ್ತು ಮಾಡಲಾಗುವುದು ಎಂದು ಹೇಳಿದ್ದಾರೆ.
ಮೈಕ್ರೋಮ್ಯಾಕ್ಸ್ ಕಂಪೆನಿ, ಪ್ರತಿ ತಿಂಗಳ ಅವಧಿಯಲ್ಲಿ ಒಂದು ಲಕ್ಷ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡುತ್ತಿದ್ದು,ವಾರ್ಷಿಕವಾಗಿ 12 ಲಕ್ಷ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಿದೆ.