ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೊಬೈಲ್: ವರ್ಷಾಂತ್ಯಕ್ಕೆ ವಿಶ್ವದಲ್ಲಿ 5.3 ಬಿಲಿಯನ್ ಬಳಕೆದಾರರು (Unwired world | Mobile phone | Users | Internet)
Bookmark and Share Feedback Print
 
ಪ್ರಸಕ್ತ ವರ್ಷಾಂತ್ಯಕ್ಕೆ ವಿಶ್ವದ ಮೊಬೈಲ್ ಬಳಕೆದಾರರ ಸಂಖ್ಯೆ 5.3 ಬಿಲಿಯನ್‌ಗಳಿಗೆ ತಲುಪಲಿದೆ ಎಂದು ಇಂಟರ್‌ನ್ಯಾಷನಲ್ ಟೆಲಿಕಮ್ಯೂನಿಕೇಶನ್‌ ಯುನಿಯನ್ ವರದಿಯಲ್ಲಿ ಬಹಿರಂಗಪಡಿಸಿದೆ.

ವಿಶ್ವದ ಜನಸಂಖ್ಯೆಯಲ್ಲಿ ಶೇ.90 ರಷ್ಟು ಜನತೆಗೆ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಲಭ್ಯವಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ.68ರಷ್ಟು ಜನತೆ ಮೊಬೈಲ್ ಗ್ರಾಹಕರಾಗಿದ್ದಾರೆ ಎಂದು ಮೆಕ್ಸಿಕೊದಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಇಂಟರ್‌ನ್ಯಾಷನಲ್ ಟೆಲಿಕಮ್ಯೂನಿಕೇಶನ್‌ ಯುನಿಯನ್ ಪ್ರಕಟಿಸಿದೆ.

ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಕೂಡಾ ಭಾರಿ ಹೆಚ್ಚಳವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಇಂಟರ್‌ನೆಟ್ ಬಳಕೆಗದಾರರ ಸಂಖ್ಯೆಯಲ್ಲಿ ದ್ವಿಗುಣವಾಗಿ, 2010ಕ್ಕೆ 2 ಬಿಲಿಯನ್‌ಗಳಿಗೆ ತಲುಪಿದೆ.2009ರ ಅವಧಿಯಲ್ಲಿ ಮನೆಯಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 1.4 ಬಿಲಿಯನ್‌ನಿಂದ 1.6 ಬಿಲಿಯನ್‌ಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ವರ್ಷಾಂತ್ಯಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ.71ರಷ್ಟು ಜನತೆ ಆನ್‌ಲೈನ್ ಸೌಲಭ್ಯವನ್ನು ಪಡೆಯಲಿದ್ದಾರೆ.ಆದರೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶೇ.21ರಷ್ಟು ಜನತೆ ಮಾತ್ರ ಆನ್‌‌ಲೈನ್ ಸೌಲಭ್ಯ ಪಡೆಯಲಿದ್ದಾರೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ