ವಿದ್ಯುತ್ ಮತ್ತು ನೀರು ಸಮಸ್ಯೆ ಎದುರಿಸುತ್ತಿರುವ ಜನತೆ, ಇದೀಗ ಮತ್ತೊಂದು ಸಮಸ್ಯೆಯನ್ನು ಎದುರಿಸಲು ಸಜ್ಜಾಗುವ ಸ್ಥಿತಿ ಎದುರಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಸಿಮೆಂಟ್ ಉತ್ಪಾದಕ ಕಂಪೆನಿಗಳು ದರವನ್ನು ಹೆಚ್ಚಳಗೊಳಿಸಲು ನಿರ್ಧರಿಸಿವೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರತಿ 50 ಕೆಜಿ ಸಿಮೆಂಟ್ ಬ್ಯಾಗ್‌ಗೆ 165 ರೂಪಾಯಿಗಳಿಗೆ ತಲುಪಿತ್ತು. ಆದರೆ, ಇದೀಗ ಕೆಲ ಸಂದರ್ಭಗಳಲ್ಲಿ ಪ್ರತಿ ಸಿಮೆಂಟ್ ಬ್ಯಾಗ್ ದರ 285 ರೂಪಾಯಿಗಳಿಗೆ ತಲುಪಿದೆ.ಹೆಚ್ಚಿನ ಮೊತ್ತ ಪಾವತಿಸಿದರೂ ಸುಲಭವಾಗಿ ಸಿಮೆಂಟ್ ದೊರೆಯುತ್ತಿಲ್ಲ ಎಂದು ಕಟ್ಟಡ ನಿರ್ಮಾಣಗಾರರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಸಿಮೆಂಟ್ ಉತ್ಪಾದಕರು ದರ ಹೆಚ್ಚಳಗೊಳಿಸುವ ಉದ್ದೇಶದಿಂದಾಗಿ, ಉತ್ಪಾದನೆಯಲ್ಲಿ ಕಡಿತಗೊಳಿಸಿದ್ದರಿಂದ ಸರಕಾರ ಮಧ್ಯಪ್ರವೇಶಿಸಬೇಕು ಎಂದು ಸೆಂಚುರಿ ಬಿಲ್ಡರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜೆ.ಸಿ.ಶರ್ಮಾ ಒತ್ತಾಯಿಸಿದ್ದಾರೆ.
ದರ ಹೆಚ್ಚಳವನ್ನು ಬಿಲ್ಡರ್‌ಗಳು ಗ್ರಾಹಕರ ಮೇಲೆ ಹೇರುತ್ತಿದ್ದಾರೆ. ಆದರೆ, ಬ್ಯಾಂಕ್ ಸಾಲವನ್ನು ಪಡೆದು ಅಥವಾ ಮನೆ ನಿರ್ಮಾಣಕ್ಕಾಗಿ ಉಳಿತಾಯ ಮಾಡಿ ಸ್ವತಂತ್ರವಾಗಿ ಗೃಹ ನಿರ್ಮಾಣದಲ್ಲಿ ತೊಡಗಿದವರಿಗೆ, ಸಿಮೆಂಟ್ ದರ ಏರಿಕೆ ದುಸ್ವಪನ್ವಾಗಿ ಕಾಡುತ್ತಿದೆ.