ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ತ್ರೈಮಾಸಿಕ : ಟಿವಿಎಸ್ ಮೋಟಾರ್ ನಿವ್ವಳ ಲಾಭದಲ್ಲಿ ದ್ವಿಗುಣ (TVS Motor Company | Net profit | Stock Exchange | Quarter)
Bookmark and Share Feedback Print
 
ಚೆನ್ನೈ ಮೂಲದ ಟಿವಿಎಸ್ ಮೋಟಾರ್ ಕಂಪೆನಿ, ಸೆಪ್ಟೆಂಬರ್‌ಗೆ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ದ್ವಿಗುಣವಾಗಿದ್ದು,54.78 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ತ್ರೈಮಾಸಿಕ ಅವಧಿಯಲ್ಲಿ 24.55 ಕೋಟಿ ರೂಪಾಯಿಗಳ ಲಾಭವಾಗಿತ್ತು ಎಂದು ಕಂಪೆನಿ, ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಎರಡನೇ ತ್ರೈಮಾಸಿಕ ಅವಧಿಯ ನಿವ್ವಳ ಆದಾಯ 1,618.73 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ 1,132.36 ಕೋಟಿ ರೂಪಾಯಿಗಳಾಗಿತ್ತು.

ಮುಂಬೈ ಶೇರುಪೇಟೆಯ ವಹಿವಾಟಿನ ಇಂದಿನ ವಹಿವಾಟಿನಲ್ಲಿ ಶೇರುದರಗಳಲ್ಲಿ ಶೇ.2.9ರಷ್ಟು ಏರಿಕೆಯಾಗಿ, 76.25 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ