ಸಿಂಡಿಕೇಟ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕುಗಳು ಜಂಟಿಯಾಗಿ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತೆ ಮತ್ತು ಸಲಹಾ ಮಂಡಳಿಯೊಂದನ್ನು ಸ್ಥಾಪಿಸಿದ್ದು, ತಮ್ಮ ವ್ಯಾಪ್ತಿಯಲ್ಲಿ ಕರ್ನಾಟಕದ ಪ್ರಮುಖ ಹತ್ತು ಜಿಲ್ಲೆಗಳ ಗ್ರಾಹಕರಿಗೆ ಉಚಿತವಾಗಿ ವಿತ್ತೀಯ ಸಾಕ್ಷರತೆ ಮತ್ತು ಸಾಲ ಕುರಿತ ಸಲಹಾ ಸೇವೆಗಳನ್ನು ನೀಡುವ ಉದ್ದೇಶ ಹೊಂದಿದೆ.
ರಿಸರ್ವ್ ಬ್ಯಾಂಕಿನ ನಿರ್ದೇಶನಗಳಡಿ ಈ ಸಂಸ್ಥೆಯು ಕಾರ್ಯ ನಿರ್ವಹಿಸಲಿದ್ದು, ಮಣಿಪಾಲದಲ್ಲಿ ಇದರ ಕೇಂದ್ರ ಕಚೇರಿ ಇರಲಿದೆ.
ಪ್ರತಿಷ್ಠಾನವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ, ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ತೀವ್ರ ಪ್ರಯತ್ನದ ಹೊರತಾಗಿಯೂ, ಬ್ಯಾಂಕಿನ ಉತ್ಪನ್ನಗಳ ಕುರಿತು ಜನರಿಗೆ ಅರಿವಿನ ಕೊರತೆ ಇದೆ ಎಂದರು.