ಯುಎಸ್‌ನ ಡಾಲರ್ ಎದುರು ರೂಪಾಯಿ ಮೌಲ್ಯ 19 ಪೈಸೆಯಷ್ಟು ಕುಸಿತ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 44.49 ರೂಪಾಯಿ ದಾಖಲಾಗಿದೆ ಎಂದು ಫಾರೆಕ್ಸ್ ತಿಳಿಸಿದೆ.
ಇದಕ್ಕೂ ಮೊದಲ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 4 ಪೈಸೆಯಷ್ಟು ವೃದ್ಧಿಯಾಗಿತ್ತು. ಇದೀಗ ಕುಸಿತದೆಡೆಗೆ ಕಾಲಿಟ್ಟಿದ್ದು, ಏಷ್ಯನ್ ಕರೆನ್ಸಿಗಳೆಲ್ಲವೂ ಯುಎಸ್ ಡಾಲರ್ ಎದುರು ಇಳಿಮುಖ ಕಂಡಿದೆ ಎಂದು ಫಾರೆಕ್ಸ್ ವರದಿ ಮಾಡಿದೆ.
ಇದೇ ವೇಳೆ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 20,000ಕ್ಕಿಂತ ಮೇಲೇರಿದ್ದು, ಬೆಳಗ್ಗಿನ ಆರಂಭದ ವಹಿವಾಟಿನಲ್ಲಿ 79 ಪಾಯಿಂಟ್ ಏಱಿಕೆ ದಾಖಲಿಸಿದೆ.