2011ರಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದೆ: ವಿಶ್ವಬ್ಯಾಂಕ್
ನವದೆಹಲಿ, ಶುಕ್ರವಾರ, 22 ಅಕ್ಟೋಬರ್ 2010( 19:46 IST )
ಭಾರತ 2011ರಲ್ಲಿ ಚೀನಾವನ್ನೂ ಹಿಂದಿಕ್ಕಿ ಆರ್ಥಿಕವಾಗಿ ಸದೃಢವಾಗಿ ಬೆಳೆಯಲಿದ್ದು, ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮಿಂಚಲಿದೆ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.
2011ರ ಆರ್ಥಿಕ ಲೆಕ್ಕಾಚಾರಗಳ ಬಗ್ಗೆ ದೂರದೃಷ್ಟಿಯನ್ನಿರಿಸಿಕೊಂಡ ವಿಶ್ವ ಬ್ಯಾಂಕ್ ಭಾರತ ಬಹುವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಹೇಳಿದೆ. ಚೀನಾದ ಜಿಡಿಪಿ ಶೇ.8.5ರ ಬೆಳವಣಿಗೆಯಾದರೆ ಭಾರತದ್ದು ಶೇ.8.6 ಇರಲಿದೆ ಎಂದು ಅದು ಲೆಕ್ಕಾಚಾರ ಹಾಕಿದೆ.
ಚೀನಾದ ಮೂರನೇ ತ್ರೈಮಾಸಿಕ ವರದಿಯಲ್ಲಿ ಬೆಳವಣಿಗೆ ದರ ಶೇ.9.6ಕ್ಕೆ ಕುಸಿದಿರುವುದೂ ಕೂಡಾ ಈ ಹೇಳಿಕೆಗೆ ಕಾರಣ.