ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ, ಯಮಾಹಾ ಮೋಟಾರ್, 'ಮಿಡ್ನೈಟ್ ಸ್ಪೆಷಲ್' ಎಂಬ ಹೆಸರಿನ ಆವೃತ್ತಿಯಲ್ಲಿ ಎಫ್ಝಡ್ ಸರಣಿಯ ಸೀಮಿತ ಆವೃತ್ತಿಯ ಬೈಕ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಇದರ ಎಕ್ಸ್-ಶೋರೂಂ ಬೆಲೆ 67,500 ರೂ.
ಎಫ್ಝಡ್, ಎಫ್ಝಡ್-ಎಸ್ ಮತ್ತು ಫೇಜರ್ ಮಾದರಿಯ ತಲಾ 1000 ಬೈಕುಗಳನ್ನು ಮಾತ್ರವೇ ಭಾರತೀಯ ಯಮಾಹಾ ಕಂಪನಿ ಉತ್ಪಾದಿಸಲಿದೆ ಎಂದು ಕಂಪನಿ ತಿಳಿಸಿದೆ.
ಹಬ್ಬದ ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು, ಹೊರತರಲಾಗಿರುವ ಈ ಮೂರು ಮಾದರಿಯ ಬೈಕುಗಳ ಎಕ್ಸ್-ಶೋರೂಂ ಬೆಲೆ 67,500 ರೂ., 69,500 ರೂ. ಮತ್ತು 74,500 ರೂ. ಆಗಿರುತ್ತದೆ.