ದೇಶಿಯ ಗೋಧಿ ಮತ್ತು ಭತ್ತದ ಬೇಡಿಕೆಯನ್ನು ನಿಗಿಸಲು, ಅಗತ್ಯವಾದ ಆಹಾರ ಧಾನ್ಯಗಳನ್ನು ರಫ್ತು ಮಾಡುವಂತೆ ಭಾರತಕ್ಕೆ ಮನವಿ ಮಾಡಲಾಗುವುದು ಎಂದು ಬಾಂಗ್ಲಾದೇಶದ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶದ ವಾಣಿಜ್ಯ ಸಚಿವ ಮುಹಮ್ಮದ್ ಫಾರುಕ್ ಖಾನ್ ಮಾತನಾಡಿ, ಗೋಧಿ ಮತ್ತು ಭತ್ತ ಸೇರಿದಂತೆ ಇತರ ಆಹಾರ ಧಾನ್ಯಗಳ ಕೊರತೆಯಾಗಿದೆ ಎಂದು ತಿಳಿಸಿದ್ದಾರೆ.
ಭಾರತದ ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರೊಂದಿಗೆ ನಾಳೆ ಮಾತುಕತೆ ನಡೆಯಲಿದ್ದು, ದೇಶಕ್ಕೆ ಅಗತ್ಯವಾದ ಗೋಧಿ ಮತ್ತು ಭತ್ತವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ಸಚಿವ ಖಾನ್ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ, ಬಾಸ್ಮತಿ-ರಹಿತ ಭತ್ತ ಮತ್ತು ಗೋಧಿ ರಫ್ತು ವಹಿವಾಟಿಗೆ ಭಾರತ ಸರಕಾರ ನಿಷೇಧ ಹೇರಿದೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದ ವಾಣಿಜ್ಯ ಸಚಿವ ಮುಹಮ್ಮದ್ ಫಾರುಕ್ ಖಾನ್ ಅವರ ಪ್ರಕಾರ, ದೇಶಕ್ಕೆ ವಾರ್ಷಿಕವಾಗಿ 1 ಮಿಲಿಯನ್ ಟನ್ ಭತ್ತ ಮತ್ತು ಗೋಧಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಭವಿಷ್ಯದ ದಿನಗಳಲ್ಲಿ ಭಾರತದಿಂದ ಗೋಧಿ ಮತ್ತು ಭತ್ತವನ್ನು ಅಮುದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಭಾರತದಿಂದ ಅಮುದು ಮಾಡಿಕೊಂಡಲ್ಲಿ, ಸರಕು ಸಾಗಣೆ ವೆಚ್ಚ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.