ದೇಶದ ಟೆಲಿಕಾ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿರುವ ವೋಡಾಫೋನ್ನ ಉಪಾಧ್ಯಕ್ಷ ಸಾಂತಾಕ್ರೂಜ್ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೋಡಾಫೋನ್ ಕಂಪೆನಿಯ ಉಪಾಧ್ಯಕ್ಷ 47 ವರ್ಷ ವಯಸ್ಸಿನ ಚಂದ್ರಮೌಳಿ, ಸಾಂತ್ರಕ್ರೂಜ್ನ ತ್ರಿಮಬರ್ತಿ ಸೂಸೈಟಿ ಬಿಲ್ಡಿಂಗ್ನಲ್ಲಿರುವ ತಮ್ಮ ನಿವಾಸದಲ್ಲಿ ಫ್ಯಾನ್ಗೆ ನೇಣುಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಧುಕರ್ ಚೌಧರಿ ತಿಳಿಸಿದ್ದಾರೆ.
ಮುಂಬೈಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅಯ್ಯರ್, ಇಂದು ಮಧ್ಯಾಹ್ನ ತಮ್ಮ ಗೆಳೆಯ ನಿವಾಸಕ್ಕೆ ಭೇಟಿ ನೀಡಿ ತೆರಳಿದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಚೌಧರಿ ವಿವರಣೆ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಆತ್ಮಹತ್ಯೆಗೆ ಕಾರಣವಾದ ನಿಖರ ಮಾಹಿತಿಗಳು ಲಭ್ಯವಾಗಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.