ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಸಣ್ಣ ಕಾರುಗಳನ್ನು ಮಾರುಕಟ್ಟೆಗೆ ತರಲು ಜನರಲ್ ಮೋಟಾರ್ಸ್ ಕಂಪನಿ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಮುಂದಿನ ವರ್ಷ ಈ ಕಾರುಗಳು ಮಾರುಕಟ್ಟೆಗೆ ಬರಲಿದೆ.
ಇದು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದ್ದು, ಗ್ರಾಹಕರಿಗೆ ತುಂಬಾ ಇಷ್ಟವಾಗುವ ರೀತಿಯಲ್ಲಿ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕರ್ಲ್ ಸ್ಲೈಮ್ ತಿಳಿಸಿದ್ದಾರೆ.
ಚೀನಾದ ಶಾಂಘೈ ಆಟೋ ಕಾರ್ ಕಂಪೆನಿಯ ಸಹಭಾಗಿತ್ವದಲ್ಲಿ ಜನರಲ್ ಮೋಟಾರ್ಸ್ ಈ ವಿದ್ಯುತ್ ಚಾಲಿತ ಸಣ್ಣ ಕಾರುಗಳನ್ನು ತಯಾರಿಸುತ್ತಿದೆ ಎಂದು ಅವರು ವಿವರಿಸಿದ್ದಾರೆ. ಸಣ್ಣ ಮಾದರಿಯ ವಿದ್ಯುತ್ ಚಾಲಿತ ಕಾರು ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಹೆಚ್ಚು ಆಕರ್ಷಿಸಲಿದೆ ಎಂಬ ವಿಶ್ವಾಸ ನಮ್ಮದು ಎಂದು ಕರ್ಲ್ ತಿಳಿಸಿದ್ದಾರೆ.