ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರ್ತಿ ಏರ್‌ಟೆಲ್‌ನಿಂದ ವರ್ಷಾಂತ್ಯಕ್ಕೆ ಬಹುನಿರೀಕ್ಷಿತ 3ಜಿ ಸೇವೆ (Bharti airtel | 3g services | Vodafone | Tata Teleservices)
Bookmark and Share Feedback Print
 
PTI
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್, ಬಹುನಿರೀಕ್ಷಿತ 3ಜಿ ಸೇವೆಗಳು ವರ್ಷಾಂತ್ಯಕ್ಕೆ ಆರಂಭವಾಗಲಿವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಟಾಟಾ ಟೆಲಿಸರ್ವಿಸಸ್ ಮತ್ತು ವೋಡಾಫೋನ್ ಟೆಲಿಕಾಂ ಕಂಪೆನಿಗಳು 3ಜಿ ಸೇವೆಗಳನ್ನು ನೀಡುವುದಾಗಿ ಘೋಷಿಸಿದ ನಂತರ, ಭಾರ್ತಿ ಏರ್‌ಟೆಲ್ ಕೂಡಾ ವರ್ಷಾಂತ್ಯಕ್ಕೆ 3ಜಿ ಸೇವೆಗಳನ್ನು ನೀಡಲು ಸಿದ್ಧ ಎಂದು ಪ್ರಕಟಿಸಿದೆ.

ಟಾಟಾ ಟೆಲಿಸರ್ವಿಸಸ್, ದೀಪಾವಳಿ ಹಬ್ಬದೊಳಗಾಗಿ ಬಹುನಿರೀಕ್ಷಿತ 3ಜಿ ಸೇವೆಗಳನ್ನು ನೀಡುವುದಾಗಿ ಘೋಷಿಸಿದೆ. ಏತನ್ಮಧ್ಯೆ, ವೋಡಾಫೋನ್, 2011ರ ಆರಂಭದಲ್ಲಿ 3ಜಿ ಸೇವೆಗಳನ್ನು ನೀಡಲಾಗುವುದು ಎಂದು ಹೇಳಿಕೆ ನೀಡಿದೆ.

ಆದರೆ, ಭಾರ್ತಿ ಏರ್‌ಟೆಲ್ ಸಂಸ್ಥೆ ವರ್ಷಾಂತ್ಯಕ್ಕೆ 3ಜಿ ಸೇವೆಗಳನ್ನು ನೀಡುವುದಾಗಿ, ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಹೊಸತೊಂದು ಕ್ರಾಂತಿಯಾಗಲಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

3ಜಿ ಮೊಬೈಲ್ ಸೇವೆಯಿಂದಾಗಿ, ಗ್ರಾಹಕರು ಬ್ರಾಡ್‌ಬ್ಯಾಂಡ್‌ ಸೇವೆಗಳೊಂದಿಗೆ ಪಠ್ಯವನ್ನು ಹೈ-ಸ್ಪೀಡ್‌ನೊಂದಿಗೆ ಡೌನ್‌ಲೋಡ್ ಮಾಡಬಹುದಾಗಿದೆ.

ಏರ್‌ಟೆಲ್ ಸಂಸ್ಥೆ, ದೇಶದ 13 ವಲಯಗಳಲ್ಲಿ 3ಜಿ ಸೇವೆಗಳ ಬಿಡ್ ಪಡೆಯಲು ಅತ್ಯಧಿಕ 12,295.46 ಕೋಟಿ ರೂಪಾಯಿಗಳನ್ನು ಪಾವತಿಸಿದೆ.

ಭಾರ್ತಿ ಏರ್‌ಟೆಲ್, ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್‌ನಂತಹ ನಗರಗಳ 3ಜಿ ಸೇವೆಗಳನ್ನು ತನ್ನ ತೆಕ್ಕೆಗೆಳೆದುಕೊಂಡಿದೆ. ವಿಶ್ವದ 19 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರ್ತಿ ಏರ್‌ಟೆಲ್, ಸೆಶೆಲ್ಸ್‌ನಲ್ಲಿ 3ಜಿ ಸೇವೆಗಳನ್ನು ಆರಂಭಿಸುತ್ತಿರುವುದಾಗಿ ಹೇಳಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ