ಪೆಟ್ರೋಲ್ ದರ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಪೆಟ್ರೋಲ್ ಹೊರತುಪಡಿಸಿ ಇತರ ತೈಲಗಳು ಅನುದಾನಿತ ದರದಲ್ಲಿ ಗ್ರಾಹಕರಿಗೆ ವಿತರಿಸಲಾಗುವುದು ಎಂದು ಕೇಂದ್ರದ ಗೃಹಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪೆಟ್ರೋಲ್ ದರ ಏರಿಕೆಯನ್ನು ನಿಯಂತ್ರಿಸಲಾಗದು.ಭಾರತ ಶೇ.70ರಷ್ಟು ತೈಲವನ್ನು ವಿದೇಶಗಳಿಂದ ಅಮುದು ಮಾಡಿಕೊಳ್ಳುತ್ತಿದೆ ಎಂದು ತವರು ಜಿಲ್ಲೆಗೆ ಆಗಮಿಸಿದ ಸಚಿವ ಚಿದಂಬರಂ ತಿಳಿಸಿದ್ದಾರೆ.
ಆದಾಗ್ಯೂ, ಅಡುಗೆ ಅನಿಲಕ್ಕೆ 300 ರೂಪಾಯಿಗಳು ಮತ್ತು ಪ್ರತಿ ಲೀಟರ್ ಸೀಮೆ ಎಣ್ಣೆಗೆ 15 ರೂಪಾಯಿ ಅನುದಾನವನ್ನು ಸರಕಾರ ನೀಡುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಜನೆವರಿ ತಿಂಗಳ ಅವಧಿಯಲ್ಲಿ, ಕೇಂದ್ರ ಸರಕಾರ ಪೆಟ್ರೋಲ್ ದರ ಏರಿಕೆಯನ್ನು ನಿಯಂತ್ರಣದಿಂದ ಮುಕ್ತಗೊಳಿಸಿ,ಉತ್ಪಾದನಾ ವೆಚ್ಚದಂತೆ, ದರವನ್ನು ನಿಗದಿಪಡಿಸಲು ತೈಲ ಕಂಪೆನಿಗಳಿಗೆ ಅವಕಾಶ ನೀಡಿತ್ತು.