ಮೊಬೈಲ್ ಸೇವಾ ಕಂಪೆನಿಗಳನ್ನು ಬದಲಿಸಿದ ನಂತರವೂ ಗ್ರಾಹಕರು ಅದೇ ಸಂಖ್ಯೆಯನ್ನು ಉಳಿಸಿಕೊಳ್ಳುವ ಮೊಬೈಲ್ ನಂಬರ್ ಪೋರ್ಟೆಬಿಲಿಟಿ(ಎಂಎನ್‌ಪಿ)ನವೆಂಬರ್ 1 ರಿಂದ ಜಾರಿಗೆ ಬರಲಿದ್ದು, ಹರಿಯಾಣಾದಿಂದ ಆರಂಭವಾಗಲಿದೆ ಎಂದು ಟೆಲಿಕಾಂ ಖಾತೆ ಸಚಿವ ಎ.ರಾಜಾ ಹೇಳಿದ್ದಾರೆ.
ಮೊಬೈಲ್ ನಂಬರ್ ಪೋರ್ಟೆಬಿಲಿಟಿ((ಎಂಎನ್‌ಪಿ)ನವೆಂಬರ್ 1 ರಿಂದ ಜಾರಿಗೆ ಬರಲಿದ್ದು, ಹರಿಯಾಣಾದಿಂದ ಆರಂಭವಾಗಲಿದೆ. ನಂತರ ಇತರ ರಾಜ್ಯಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವ ಎ.ರಾಜಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೊಬೈಲ್ ನಂಬರ್ ಪೋರ್ಟೆಬಿಲಿಟಿ( ಈಗಾಗಲೇ ಹಲವು ಕಾರಣಗಳಿಂದ ವಿಳಂಬವಾಗಿದೆ. ಅಗತ್ಯವಾದ ಮೂಲಸೌಕರ್ಯ ಕೊರತೆ ಕೂಡಾ ವಿಳಂಬವಾಗಲು ಪ್ರಮುಖ ಕಾರಣಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಟೆಲಿಕಾಂ ಇಲಾಖೆ, ಸೈನಿವರ್ಸೆ ಟೆಕ್ನಾಲಾಜೀಸ್ ಮತ್ತು ಎಂಎನ್‌ಪಿ ಇಂಟರ್‌ಕನೆಕ್ಷನ್ ಟೆಲಿಕಾಂ ಸಲ್ಯೂಶನ್ಸ್‌ಗೆ ಪರವಾನಿಗಿ ನೀಡಿದೆ.ಅಮೆರಿಕ ಮೂಲದ ಟೆಲ್‌ಕೊರ್ಡಿಯಾ ಮತ್ತು ದೀಪಕ್ ತಲ್ವಾರ್ ಕನ್ಸಲ್‌ಟಂಟ್ಸ್ ಖಾಸಗಿ ಸಂಸ್ಥೆಗೆ 74:26 ಅನುಪಾತದ ಸಹಭಾಗಿತ್ವವನ್ನು ಹೊಂದಿದೆ.