ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತ, ಪಾಕ್ ಆಕ್ರಮಿತ ಕಾಶ್ಮಿರ ವಹಿವಾಟು ರದ್ದು (India | PoK | Cross border | Protest rallies | Suspend)
Bookmark and Share Feedback Print
 
ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ(ಪಿಒಕೆ) ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಒಂದು ದಿನದ ಅವಧಿಗೆ ಭಾರತ ಮತ್ತು ಪಾಕಿಸ್ತಾನ ಮಧ್ಯದ ಗಡಿ ವಹಿವಾಟನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ವಾರದ ಮಂಗಳವಾರ ಮತ್ತು ಬುಧವಾರದಂದು ಶ್ರೀನಗರ-ಮುಝಾಫರಾಬಾದ್‌ ರಸ್ತೆಯಲ್ಲಿ ನಡೆಯುವ ವಹಿವಾಟನ್ನು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದಾಗಿ ರದ್ದುಗೊಳಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ದಿನದ ವಹಿವಾಟಿನಲ್ಲಿ ಸರಕುಗಳನ್ನು ಹೊತ್ತ 49 ಭಾರತೀಯ ಟ್ರಕ್‌ಗಳು ಪಾಕಿಸ್ತಾನವನ್ನು ಪ್ರವೇಶಿಸಿದ್ದು, ಪಾಕಿಸ್ತಾನದಿಂದ 14 ಟ್ರಕ್‌ಗಳು ಭಾರತವನ್ನು ಪ್ರವೇಶಿಸಿವೆ ಎಂದು ಮೂಲಗಳು ತಿಳಿಸಿವೆ.

ಇಂದು ಬೆಳಿಗ್ಗೆ ಭಾರತದ ಸುಮಾರು 39 ಟ್ರಕ್‌ಗಳು ಸರಕುಗಳನ್ನು ಹೊತ್ತು ಪಾಕಿಸ್ತಾನವನ್ನು ಪ್ರವೇಶಿಸಲು ಭಾರತದ ಗಡಿಯಲ್ಲಿ ಕಾಯುತ್ತಿದ್ದವು.ಆದರೆ, ವಹಿವಾಟು ರದ್ದುಗೊಂಡ ಹಿನ್ನೆಲೆಯಲ್ಲಿ ಮರಳಿದವು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ