ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಯಾದ ಎಚ್‌ಸಿಎಲ್ ಇನ್ಫೋಸಿಸ್ಟಮ್ಸ್, ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಅವಧಿಯ ನಿವ್ವಳ ಲಾಭದಲ್ಲಿ ಶೇ.19.5ರಷ್ಟು ಇಳಿಕೆಯಾಗಿದೆ.
ಕಳೆದ ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ 58.87 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿತ್ತು ಎಂದು ಎಚ್‌ಸಿಎಲ್ ಇನ್ಫೋಸಿಸ್ಟಮ್ಸ್ ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಸೆಪ್ಟೆಂಬರ್ 30ಕ್ಕೆ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಮಾರಾಟದಲ್ಲಿ ಕುಸಿತವಾಗಿ 2,959.37 ಕೋಟಿ ರೂಪಾಯಿಗಳಿಗೆ ಕುಸಿದಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ 2,998.97 ಕೋಟಿ ರೂಪಾಯಿಗಳಿಗೆ ತಲುಪಿತ್ತು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅದನ್ನು ಹೊರತುಪಡಿಸಿ, ಕಂಪೆನಿಯ ಅಡಳಿತ ಮಂಡಳಿ 2 ರೂಪಾಯಿ ಮುಖ ಬೆಲೆಯ ಶೇರುದಾರರಿಗೆ ಡೆವಿಡೆಂಡ್ ಘೋಷಿಸಿದೆ.
ಶೇರುಪೇಟೆಯ ಇಂದಿನ ವಹಿವಾಟಿನ ಮುಕ್ತಾಯಕ್ಕೆ ಕಂಪೆನಿಯ ಶೇರು ದರಗಳಲ್ಲಿ ಶೇ.2.23ರಷ್ಟು ಕುಸಿತವಾಗಿ, 116 ರೂಪಾಯಿಗಳಿಗೆ ತಲುಪಿದೆ.