ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.13.75ಕ್ಕೆ ಇಳಿಕೆ ಕಂಡ ಆಹಾರ ಹಣದುಬ್ಬರ ದರ (Food inflation | Vegetables | Potatoes | Onions | Down)
Bookmark and Share Feedback Print
 
PTI
ತರಕಾರಿ ದರಗಳಲ್ಲಿ ಅಲ್ಪ ಇಳಿಕೆಯಾಗಿದ್ದರಿಂದ, ಅಕ್ಚೋಬರ್ 16ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.13.75ಕ್ಕೆ ಇಳಿಕೆಯಾಗಿದೆ.

ಅಕ್ಟೋಬರ್ 9ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.15.53ಕ್ಕೆ ತಲುಪಿತ್ತು.ಆದರೆ, ಅಕ್ಟೋಬರ್ 16ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರದಲ್ಲಿ ಶೇ.1.78ರಷ್ಟು ಇಳಿಕೆಯಾಗಿ ಶೇ.13.75ಕ್ಕೆ ತಲುಪಿದೆ.

ಸತತ ಎರಡನೇ ವಾರಗಳ ಅವದಿಗೆ ಆಹಾರ ಹಣದುಬ್ಬರ ದರ ಇಳಿಕೆ ಕಂಡಿದೆ.

ವಾರ್ಷಿಕ ಆಧಾರದ ಹಿನ್ನೆಲೆಯಲ್ಲಿ, ಆಲೂಗಡ್ಡೆ ದರದಲ್ಲಿ ಶೇ.49.69ರಷ್ಟು ಇಳಿಕೆಯಾಗಿದ್ದು, ಈರುಳ್ಳಿ ದರದಲ್ಲಿ ಶೇ.6.93ರಷ್ಟು ಕುಸಿದಿದೆ.

ಒಟ್ಟಾರೆ, ತರಕಾರಿ ದರ ವಾರ್ಷಿಕ ಆಧಾರದನ್ವಯ ಶೇ.0.77ರಷ್ಟು ಇಳಿಕೆ ಕಂಡಿದೆ. ಏತನ್ಮಧ್ಯೆ, ದ್ವಿದಳ ಧಾನ್ಯ, ಹಾಲು, ಹಣ್ಣು ದರಗಳ ಏರಿಕೆ ಮುಂದುವರಿದಿದೆ.

ಮುಂಗಾರು ಮಳೆ ಉತ್ತಮವಾಗಿದ್ದರಿಂದ ಹಾಗೂ ಆಹಾರ ಧಾನ್ಯಗಳ ಸುಗಮ ಸರಬರಾಜಿನ ಹಿನ್ನೆಲೆಯಲ್ಲಿ, ದರಗಳಲ್ಲಿ ಇಳಿಕೆಯಾಗುತ್ತಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ