ಡಿಸೆಂಬರ್ನಲ್ಲಿ ಬಿಎಂಡಬ್ಲ್ಯುನಿಂದ ಮೋಟಾರ್ ಬೈಕ್ ಬಿಡುಗಡೆ
ನವದೆಹಲಿ, ಶನಿವಾರ, 30 ಅಕ್ಟೋಬರ್ 2010( 13:43 IST )
ಜರ್ಮನಿಯ ವಾಹನೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಿಎಂಡಬ್ವೂ, ಮುಂಬರುವ ಡಿಸೆಂಬರ್ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಮೋಟಾರ್ಸೈಕಲ್ಗಳನ್ನು ಬಿಡುಗಡೆ ಮಾಡಲಾಗಿದ್ದು, ಆರಂಭಿಕ ದರ ಕೇವಲ 18 ಲಕ್ಷ ರೂಪಾಯಿಗಳಾಗಿವೆ.
ದೇಶದಲ್ಲಿ ಅಧಿಕೃತ ಅಮುದು ಡೀಲರ್ಗಳೊಂದಿಗೆ ಮುಂಬರುವ ಡಿಸೆಂಬರ್ನಿಂದ ವಹಿವಾಟು ಆರಂಭಿಸಲಿದೆ ಎಂದು ಬಿಎಂಡಬ್ಲ್ಯು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವದಾದ್ಯಂತ ಬಿಎಂಡಬ್ಲ್ಯು ಮೋಟಾರ್ಸೈಕಲ್ ವಿಭಾಗವನ್ನು ಬಿಎಂಡಬ್ಲ್ಯೂಮೊಟಾರ್ರಾಡ್ ಎಂದು ಕರೆಯಿಸಿಕೊಳ್ಳುವ ಕಂಪೆನಿ, ಆರಂಭದಲ್ಲಿ ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಶೋರೂಂಗಳನ್ನು ತೆರೆಯಲಿದೆ ಎಂದು ಮೂಲಗಳು ತಿಳಿಸಿವೆ.
4 ಸಿಲಿಂಡರ್ ಇಂಜಿನ್ಗಳನ್ನು ಹೊಂದಿರುವ ಆರ್ 1200ಜಿಎಸ್, ಎಸ್ 1000 ಆರ್ಆರ್ ಮತ್ತು ಕೇ-ಸೀರಿಸ್ ಮಾಡೆಲ್ ಬೈಕ್ಗಳನ್ನ ಕೂಡಾ ದೇಶಿಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಕಂಪೆನಿಯನ್ನು ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.