ಬಿಎಚ್‌ಇಎಲ್ 2ನೇ ತ್ರೈಮಾಸಿಕ ಲಾಭದಲ್ಲಿ ಶೇ.33ರಷ್ಟು ಹೆಚ್ಚಳ
ಮುಂಬೈ, ಶುಕ್ರವಾರ, 29 ಅಕ್ಟೋಬರ್ 2010( 15:21 IST )
ಸರಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್(ಬಿಎಚ್‌ಇಎಲ್) ಕಂಪೆನಿ, ಸೆಪ್ಟೆಂಬರ್ 30ಕ್ಕೆ ಎರಡನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.33ರಷ್ಟು ಏರಿಕೆಯಾಗಿ 1,142.28 ಕೋಟಿ ರೂಪಾಯಿಗಳಿಗೆ ತಲುಪಿದೆ.
ಕಳೆದ ವರ್ಷದ ಜುಲೈ-ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ, 857.88 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿದೆ ಎಂದು ಬಿಎಚ್‌ಇಎಲ್,ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಬೆಂಗಳೂರು ಮೂಲದ ಕಂಪೆನಿಯ ನಿವ್ವಳ ವಹಿವಾಟು 6,625.21 ಕೋಟಿ ರೂಪಾಯಿಗಳಿಂದ 8,328.41ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.95ರಷ್ಟು ಏರಿಕೆಯಾಗಿ 2,475 ರೂಪಾಯಿಗಳಿಗೆ ತಲುಪಿದೆ.