ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೀಪಾವಳಿ:ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ರಿಯಾಯಿತಿ ಸಾಲ (HDFC Bank | special loans | Govt | Defence personnel)
Bookmark and Share Feedback Print
 
ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ದೀಪಾವಳಿ ಹಬ್ಬದ ಕೊಡುಗೆಯಾಗಿ ಸರಕಾರಿ ನೌಕರರಿಗೆ ವೈಯಕ್ತಿಕ ಸಾಲಕ್ಕಾಗಿ ಬಡ್ಡಿದರದಲ್ಲಿ ಶೇ.4 ರಷ್ಟು ಕಡಿತಗೊಳಿಸಿ ಶೇ.11.5ಕ್ಕೆ ನಿಗದಿಪಡಿಸಿದೆ.

ಹಬ್ಬದ ಅಂಗವಾಗಿ ವಿಶೇಷ ರಿಯಾಯತಿಯನ್ನು ಬ್ಯಾಂಕ್ ಘೋಷಿಸಿದ್ದು, ನವೆಂಬರ್ 30ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.ಸರಕಾರಿ ನೌಕರರು ಮತ್ತು ರಕ್ಷಣಾ ಕ್ಷೇತ್ರದ ಉದ್ಯೋಗಿಗಳಿಗೆ ಶೇ.4ರಷ್ಟು ಬಡ್ಡಿ ದರವನ್ನು ಕಡಿತಗೊಳಿಸಲಾಗಿದೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ಬ್ಯಾಂಕ್‌ಗಳಲ್ಲಿ ವೇತನ ಖಾತೆಗಳನ್ನು ಹೊಂದಿರುವ ಗ್ರಾಹಕರು, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರದಲ್ಲಿ ಶೇ.3ರಷ್ಟು ಕಡಿತದ ರಿಯಾಯಿತಿ ಪಡೆಯಲಿದ್ದಾರೆ.

ಪ್ರಸ್ತುತ, ವೈಯಕ್ತಿಕ ಸಾಲದ ಮೇಲಿನ ಬ್ಯಾಂಕ್ ಬಡ್ಡಿ ದರವನ್ನು ವಾರ್ಷಿಕ ಶೇ.15.5ರಿಂದ ಶೇ.22ರ ವರೆಗೆ ನಿಗದಿಪಡಿಸಲಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ