ರಿಲಿಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.27ರಷ್ಟು ಹೆಚ್ಚಳ
ಮುಂಬೈ, ಶನಿವಾರ, 30 ಅಕ್ಟೋಬರ್ 2010( 16:06 IST )
ತೈಲ ಬೇಡಿಕೆಯ ಹೆಚ್ಚಳದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್,ತ್ರೈಮಾಸಿಕ ನಿವ್ವಳ ಲಾಭದಲ್ಲಿ ಶೇ.27.8 ಏರಿಕೆಯಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ತೈಲ ಮತ್ತು ಅನಿಲ, ಪೆಟ್ರೋಕೆಮಿಕಲ್ಸ್, ರಿಫೈನಿಂಗ್ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿರುವ ಶೇರುಪೇಟೆ ನೊಂದಾಯಿತ ರಿಲಯನ್ಸ್, ಸೆಪ್ಟೆಂಬರ್ 30ಕ್ಕೆಅಂತ್ಯಗೊಂಡಂತೆ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭ 49.23 ಬಿಲಿಯನ್ ರೂಪಾಯಿಗಳಿಗೆ ತಲುಪಿದೆ.
ಕಳೆದ ವರ್ಷದ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭ 38.52 ಕೋಟಿ ರೂಪಾಯಿಗಳಾಗಿತ್ತು ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಫೋರ್ಬ್ಸ್ ಪ್ರಕಾರ ವಿಶ್ವದ ನಾಲ್ಕನೇ ಶ್ರೀಮಂತ ಉದ್ಯಮಿ ಎನ್ನುವ ಗೌರವ ಪಡೆದ ಮುಕೇಶ್ ಅಂಬಾನಿ, ಸಾಗರೋತ್ತರ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂದಿನ ಶೇರುಪೇಟೆ ವಹಿವಾಟಿನಲ್ಲಿ ರಿಲಯನ್ಸ್ ಶೇರುಗಳ ದರಗಳಲ್ಲಿ ಶೇ.0.6ರಷ್ಟು ಏರಿಕೆಯಾಗಿದ್ದು, ಒಟ್ಟು 81 ಬಿಲಿಯನ್ ಡೌಲರ್ ಮೌಲ್ಯವನ್ನು ಹೊಂದಿದೆ.