ದೀಪಾವಳಿ ಹಬ್ಬದ ವೇಳೆಗೆ ಮುಂಬೈನ ಬಿಎಸ್‌ಇ ಶೇರು ಸೂಚ್ಯಂಕ 21 ಸಾವಿರ ಅಂಶಗಳ ಗಡಿಯನ್ನು ದಾಟಲಿದೆ ಎಂದು ಮಾರುಕಟ್ಟೆ ತಜ್ಞರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಕಳೆದ ವಾರದ ವಹಿವಾಟಿನಲ್ಲಿ ಶೇರುಪೇಟೆ ಶೇಕಡಾ 0.66ರಷ್ಟು ಕುಸಿತ ಕಂಡಿತ್ತು. ಆದರೆ ಎರಡನೇ ತ್ರೈಮಾಸಿಕ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಗಳಿಸಿದ ಆದಾಯವು ಹೂಡಿಕೆದಾರರನ್ನು ಮತ್ತೊಮ್ಮೆ ತನ್ನತ್ತ ಸೆಳೆಯುವಲ್ಲಿ ಶೇರುಪೇಟೆ ಯಶಸ್ವಿಯಾಗಿದೆ.
ಹೀಗಾಗಿ ದೀಪಾವಳಿ ವೇಳೆಗೆ ಶೇರುಪೇಟೆ 21 ಸಾವಿರ ಅಂಶಗಳನ್ನು ತಲುಪುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.
ಶನಿವಾರ ಬಿಡುಗಡೆ ಮಾಡಿದ ಪ್ರಕಟನೆಯಲ್ಲಿ ಮುಕೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 27.8ರ ಲಾಂಭಾಂಶವನ್ನು ಗಳಿಸಿತ್ತು.
ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಶೇರುಪೇಟೆ 91.30 ಪಾಂಯಿಂಟ್ ಅಥವಾ 0.46 ಅಂಶ ಏರಿಕೆ ಕಾಣುವ ಮೂಲಕ 20,032.34 ಅಂಶ ತಲುಪಿತ್ತು.