ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೆಪ್ಟೆಂಬರ್‌ ರಫ್ತು ವಹಿವಾಟಿನಲ್ಲಿ ಶೇ.23ರಷ್ಟು ಹೆಚ್ಚಳ (Exports | Imports | Government data | September)
Bookmark and Share Feedback Print
 
ದೇಶದ ರಫ್ತು ವಹಿವಾಟು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಸತತ 11ನೇ ತಿಂಗಳು ಏರಿಕೆ ಕಂಡಿದ್ದು, ಶೇ.23ರಷ್ಟು ಏರಿಕೆ ಕಂಡು 18.02 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಅಮುದು ವಹಿವಾಟಿನಲ್ಲಿ ಕೂಡಾ ಶೇ.26ರಷ್ಟು ಚೇತರಿಕೆ ಕಂಡು 27.14 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಏಪ್ರಿಲ್-ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ರಫ್ತು ವಹಿವಾಟು, ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಆರು ತಿಂಗಳ ವಹಿವಾಟಿನಲ್ಲಿ ಶೇ.28ರಷ್ಟು ಏರಿಕೆಯಾಗಿ 103.65 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಏಷ್ಯಾದಲ್ಲಿ ಮೂರನೇ ಬಲಾಢ್ಯ ಆರ್ಥಿಕ ರಾಷ್ಟ್ರವಾದ ಭಾರತ, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಶೇ.15ರಷ್ಟು ರಫ್ತು ವಹಿವಾಟಿನ ಗುರಿಯನ್ನು ಹೊಂದಿದೆ ಎಂದು ಮಾರುಕಟ್ಟೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ