ದೇಶದ ಕಾರು ತಯಾರಿಕೆ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಝುಕಿ ಇಂಡಿಯಾ, ಅಕ್ಟೋಬರ್ ತಿಂಗಳ ಅವಧಿಯ ಕಾರುಗಳ ನಿವ್ವಳ ಮಾರಾಟದಲ್ಲಿ ಶೇ.39.21ರ,್ಟು ಏರಿಕೆಯಾಗಿ 1,18,908 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳ ಅವಧಿಯಲ್ಲಿ 85,415 ಕಾರುಗಳನ್ನು ಮಾರಾಟ ಮಾಡಲಾಗಿತ್ತು ಎಂದು ಮಾರುತಿ ಸುಝುಕಿ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 2010ರ ಅವಧಿಯಲ್ಲಿ ಗರಿಷ್ಠ 1,08,006 ಕಾರುಗಳನ್ನು ಮಾರಾಟ ಮಾಡಲಾಗಿದೆ. ಸತತ ಐದನೇ ಬಾರಿಗೆ ಮಾಸಿಕ ಮಾರಾಟದಲ್ಲಿ ಒಂದು ಲಕ್ಷ ಮಾರಾಟದ ಗಡಿಯನ್ನು ದಾಟಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಮಾರುತಿಯ ಅಲ್ಟೋ, ವಾಗ್ನಾರ್ ,ಎಸ್ಟಿಲೊ, ಸ್ವಿಫ್ಟ್, ಎ-ಸ್ಟಾರ್ ಮತ್ತು ರಿಟ್ಝ್ ಮಾಡೆಲ್ ಕಾರುಗಳ ಮಾರಾಟದಲ್ಲಿ ಶೇ.50.67ರಷ್ಟು ಏರಿಕೆಯಾಗಿ 77,502 ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 51,437 ಕಾರುಗಳನ್ನು ಮಾರಾಟ ಮಾಡಲಾಗಿತ್ತು.