ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಸರ್ವ್ ಬ್ಯಾಂಕ್‌ನಿಂದ ಇಂದು ರೆಪೋ ದರ ಹೆಚ್ಚಳ ಸಾಧ್ಯತೆ (Rbi | Inflation| Key rates | Pranab Mukherjee)
Bookmark and Share Feedback Print
 
ಹಣದುಬ್ಬರ ದರ ಏರಿಕೆ ನಿಯಂತ್ರಣಕ್ಕಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಇಂದು ನಡೆಯಲಿರುವ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ಹಣದುಬ್ಬರ ದರ ಸಮಾಧಾನಕರ ಮಟ್ಟದಿಂದ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ,ವಿತ್ತಸಚಿವರು ರೆಪೋ ದರ ಹೆಚ್ಚಳಕ್ಕೆ ಸಲಹೆ ನೀಡಿದ್ದಾರೆ ಎಂದು ರಿಸರ್ವ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಅಭಿವೃದ್ಧಿ ದರದೊಂದಿಗೆ ಹಣದುಬ್ಬರ ನಿಯಂತ್ರಿಸುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆದ್ಯತೆ ನೀಡುತ್ತದೆ ಎಂದು ಮ್ಯಾಕ್ರೋಎಕಾನಾಮಿಕ್ ಮತ್ತು ಮಾನಿಟರಿ ಡೆವೆಲಪ್‌ಮೆಂಟ್ ವರದಿಯಲ್ಲಿ ಬಹಿರಂಗಪಡಿಸಿದೆ.

ಒಟ್ಟಾರೆ ಹಣದುಬ್ಬರ ದರ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಶೇ.8.62ರಷ್ಟು ಏರಿಕೆ ಕಂಡಿದ್ದು, ಸಮಾಧಾನಕರ ಮಟ್ಟಕ್ಕಿಂತ ಹೆಚ್ಚಳವಾಗಿದೆ. ಪ್ರಸ್ತುತ ಆರ್ಥಿಕ ವೃದ್ಧಿ ದರ ವರ್ಷಾಂತ್ಯಕ್ಕೆ ಶೇ.8.5ಕ್ಕೆ ತಲುಪುವ ನಿರೀಕ್ಷೆಗಳಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸಕ್ತ ವರ್ಷದ ಸೆಪ್ಟೆಂಬರ್ ತಿಂಗಳ ಅವಧಿಯವರೆಗೆ, ಹಣದುಬ್ಬರ ದರ ನಿಯಂತ್ರಣಕ್ಕಾಗಿ ಐದು ಬಾರಿ ರೆಪೋ ದರಗಳಲ್ಲಿ ಹೆಚ್ಚಳ ಘೋಷಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ