ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2020ರಲ್ಲಿ ತೈಲ ಬೇಡಿಕೆಯಲ್ಲಿ 49ರಷ್ಟು ಹೆಚ್ಚಳ:ಪ್ರಧಾನಿ (Oil demand | Jump | India | Manmohan Singh | Oil companies)
Bookmark and Share Feedback Print
 
ಭಾರತದ ತೈಲ ಬೇಡಿಕೆ ಮುಂಬರುವ 10 ವರ್ಷಗಳ ಅವಧಿಯಲ್ಲಿ ಶೇ.40ರಷ್ಟು ಹೆಚ್ಚಳವಾಗಲಿದೆ. ವೇಗವಾಗಿ ವಿಸ್ತರಿಸುತ್ತಿರುವ ಆರ್ಥಿಕತೆಗೆ ಅಗತ್ಯವಾದ ತೈಲ ಬೇಡಿಕೆಯನ್ನು ನಿಗದಿತ ದರದಲ್ಲಿ ಪೂರೈಸುವುದು ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.

2009-10ರ ಅವಧಿಯಲ್ಲಿ ದೇಶದ ತೈಲ ಬೇಡಿಕೆ 138 ಮಿಲಿಯನ್ ಟನ್‌ಗಳಾಗಿತ್ತು. ದೇಶಕ್ಕೆ ಅಗತ್ಯವಾದ ತೈಲ ಬೇಡಿಕೆಯಲ್ಲಿ ಶೇ.75ರಷ್ಟನ್ನು ಅಮುದು ಮಾಡಿಕೊಳ್ಳಲಾಗುತ್ತದೆ ಕಳೆದ ವರ್ಷದ ಅವಧಿಯಲ್ಲಿ 79.5 ಬಿಲಿಯನ್ ಡಾಲರ್‌ಗಳಷ್ಟು ತೈಲವನ್ನು ಅಮುದು ಮಾಡಿಕೊಂಡಿದೆ.

ಮುಂಬರುವ 10 ವರ್ಷಗಳ ಅವಧಿಯಲ್ಲಿ ದೇಶದ ತೈಲ ಬೇಡಿಕೆ ಶೇ.40ರಷ್ಟು ಹೆಚ್ಚಳವಾಗಲಿದೆ. ಆದರೆ, ದೇಶಿಯ ತೈಲ ಬಾವಿಗಳಿಂದ ಕೇವಲ ಶೇ.12ರಷ್ಟು ತೈಲ ಸರಬರಾಜಿನ ನಿರೀಕ್ಷೆಯಿದೆ.ಆದ್ದರಿಂದ, ತೈಲ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನಹರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ತೈಲ ಬೇಡಿಕೆಯ ಕೊರತೆಯನ್ನು ನೀಗಿಸಲು, ರಾಷ್ಟ್ರದ ತೈಲ ಕಂಪೆನಿಗಳು ಸಾಗರೋತ್ತರ ತೈಲ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರಕಾರ ಉತ್ತೇಜನ ನೀಡುತ್ತಿದೆ ಎಂದು ಪ್ರಧಾನಿ ಡಾ.ಸಿಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ