ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ ನಿರೀಕ್ಷಿತ:ಬ್ಯಾಂಕರ್ಸ್
ಮುಂಬೈ, ಮಂಗಳವಾರ, 2 ನವೆಂಬರ್ 2010( 18:16 IST )
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ಮತ್ತು ರಿವರ್ಸ್ ರೆಪೋ ದರಗಳ ಏರಿಕೆಯ ಘೋಷಣೆ ನಿರೀಕ್ಷಿತವಾಗಿದೆ ಎಂದು ಬ್ಯಾಕಿಂಗ್ ಕ್ಷೇತ್ರದ ಅಧಿಕಾರಿಗಳು ಹೇಳಿದ್ದಾರೆ.
ಉತ್ತಮ ಮುಂಗಾರಿನ ಹೊರತಾಗಿಯೂ ಹಣದುಬ್ಬರ ದರ ಏರಿಕೆ ನಿಯಂತ್ರಣಕ್ಕಾಗಿ, ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಗೊಳಿಸಿರುವುದು ನಿರೀಕ್ಷಿಸಲಾಗಿತ್ತು ಎಂದು ಸಿಟಿಬ್ಯಾಂಕ್‌ನ ಮುಖ್ಯಕಾರ್ಯನಿರ್ವಾಹಕತ ಅಧಿಕಾರಿ ಅಭಇಜಿತ್ ಸೇನ್ ತಿಳಿಸಿದ್ದಾರೆ.
ಯೆಸ್ ಬ್ಯಾಂಕ್ ಹಣಕಾಸು ಹಾಗೂ ಮಾರುಕಟ್ಟೆ ವಿಭಾಗದ ಅದ್ಯಕ್ಷ ರಜತ್ ಮೊಂಗಾ ಮಾತನಾಡಿ, ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೋ ದರಗಳನ್ನು ಹೆಚ್ಚಿಸುವುದು ಆರ್‌ಬಿಐಗೆ ಅನಿವಾರ್ಯವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಣದುಬ್ಬರ ದರ ಸಮಾಧಾನಕರ ಮಟ್ಟದಿಂದ ಏರಿಕೆ ಕಂಡಿದ್ದರಿಂದ, ಹಣದುಬ್ಬರ ದರ ನಿಯಂತ್ರಣಕ್ಕಾಗಿ ರೆಪೋ ದರಗಳನ್ನು ಹೆಚ್ಚಿಸಲಾಗಿದೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.