ಅಗತ್ಯ ವಸ್ತುಗಳ ದರ ಏರಿಕೆಯಿಂದ ಕೇಂದ್ರ ಸರಕಾರ ಹಲವು ಬಾರಿ ವಿರೋಧಪಕ್ಷಗಳಿಂದ ಟೀಕೆಗೊಳಗಾಗಿದೆ. ರಾಜ್ಯ ಸರಕಾರಗಳು ದರ ಏರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ.ದರ ಏರಿಕೆ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ ಎಂದು ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಶೇರುಪೇಟೆ ಚೇತರಿಕೆ ಹಾಗೂ ಹೂಡಿಕೆಗಳಲ್ಲಿ ಹೆಚ್ಚಳದಿಂದ ಜನಸಾಮಾನ್ಯರಿಗೆ ಪ್ರಯೋಜನವಾಗುವುದಿಲ್ಲ. ಜನಸಾಮಾನ್ಯರು ಪ್ರತಿನಿತ್ಯ ದರ ಏರಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದರ ಏರಿಕೆ ಬಡವರಿಗೆ ಸವಾಲಾಗಿ ಪರಿಣಮಿಸಿದೆ ಎಂದು ಸೋನಿಯಾ ತಿಳಿಸಿದ್ದಾರೆ.
ಎಐಸಿಸಿ ಸಭೆಯಲ್ಲಿ ಮಾತನಾಡಿದ ಗಾಂಧಿ,ಹಣದುಬ್ಬರ ನಿಯಂತ್ರಿಸುವುದು ಕೇಂದ್ರ ಸರಕಾರದ ಜವಾಬ್ದಾರಿಯ ಮಧ್ಯೆಯು ರಾಜ್ಯಸರಕಾರಗಳು ಸಮಾನಾವಾದ ಜವಾಬ್ದಾರಿಯನ್ನು ಹೊಂದಿವೆ ಎಂದು ವಿರೋಧ ಪಕ್ಷಗಳಿಗೆ ಚುರುಕು ಮುಟ್ಟಿಸಿದ್ದಾರೆ.
ಕೇಂದ್ರ ಸರಕಾರದ ಯೋಜನೆಗಳು ಅನುದಾನಗಳನ್ನು ರಾಜ್ಯ ಸರಕಾರಗಳು ಪಡೆಯುತ್ತಿವೆ. ಆದರೆ.ಹಣದುಬ್ಬರ ಸಮಸ್ಯೆ ಎದುರಾದಾಗ ಕೇಂದ್ರ ಸರಕಾರವನ್ನು ಹೊಣೆಯಾಗಿಸುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯ ಸರಕಾರಗಳು ಕಾಳಸಂತೆ, ಆಹಾರ ಧಾನ್ಯಗಳ ಸಂಗ್ರಹಕಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರಕಾರಗಳ ವಿರುದ್ಧ ಹೋರಾಟ ನಡೆಸುವಂತೆ, ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.