ಆಪಲ್ ಐಫೋನ್ ಅಲಾರಾಂ ಕೈಕೊಟ್ಟಿದ್ದರಿಂದ, ಐಫೋನ್‌ಗಳ ಮಾಲೀಕರು ಮಂಗಳವಾರ ಬೆಳಿಗ್ಗೆ ಒಂದು ಗಂಟೆ ಹೆಚ್ಚು ನಿದ್ರೆಗೆ ಶರಣಾದ ಘಟನೆಗಳು ವರದಿಯಾಗಿವೆ.
ಐಫೋನ್ ಅಲಾರಾಂ ವೈಫಲ್ಯದಿಂದ, ಆಕ್ರೋಶಗೊಂಡ ಮಾಲೀಕರು, ಟ್ವಿಟ್ಟರ್‌ನಲ್ಲಿ ಸಾವಿರಾರು ಸಂದೇಶಗಳನ್ನು ರವಾನಿಸಿದ್ದಾರೆ.
ಇದಕ್ಕಿಂತ ಮೊದಲು, ಕಳೆದ ಬೇಸಿಗೆಯ ಅವಧಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ಐಫೋನ್,ಸಂಕೇತಗಳ ಗ್ರಹಿಕೆ ಕುರಿತಂತೆ ತರಾಟೆಗೆ ಒಳಗಾಗಿತ್ತು.
ಕಳೆದ ವಾರ, ಭದ್ರತಾ ಕೀ ಕೋಡ್ ಮಾಹಿತಿ ಕೊರತೆಯ ಮಧ್ಯೆಯು ಐಫೋನ್ ಬಳಕೆಯಾಗುತ್ತಿರುವುದು ಕೂಡಾ ಗ್ರಾಹಕರ ಅಕ್ರೋಶಕ್ಕೆ ಕಾರಣವಾಗಿತ್ತು.
ಐಫೋನ್‌ನಲ್ಲಿರುವ ಅಲಾರಾಂ ಸೆಟ್ಟಿಂಗ್ ವೈಫಲ್ಯದಿಂದಾಗಿ, ಸಮಯಕ್ಕೆ ಸರಿಯಾಗಿ ಅಲಾರಾಂ ಬಾರಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಐಫೋನ್ ಅಲರಾಂ ಬಗ್ಗೆ ಟ್ವಿಟ್ಟರ್‌ನಲ್ಲಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜೋಕ್‌ಗಳು ಹರಿದಾಡುತ್ತಿವೆ.
26 ವರ್ಷ ವಯಸ್ಸಿನ ಬ್ರಿಟನ್ ನಿವಾಸಿ ಗೊಯೆರ್, ಸಮಯಕ್ಕೆ ಸರಿಯಾಗಿ ಅಲಾರಾಂ ಬಾರಿಸದ ಐಫೋನ್ ಮೇಲೆ ನನಗೆ ನಂಬಿಕೆಯಿಲ್ಲ. ಇಂದು ನಾನು ಒಂದು ಗಂಟೆ ತಡವಾಗಿ ಎಚ್ಚರವಾಗಿದ್ದು, ಕಚೇರಿಗೆ ನಿಗದಿತ ಸಮಯಕ್ಕೆ ತಲುಪಲಾಗಲಿಲ್ಲ. ಕಚೇರಿ ತಲುಪಿದಾಗ ಬಾಸ್ ತುಂಬಾ ಕೋಪದಲ್ಲಿದ್ದರು. ನನ್ನಂತೆ ಇತರರಿಗೆ ಕೂಡಾ ಇಂತಹ ಅನುಭವಗಳಾಗಿರಬಹುದು ಎಂದು ಟ್ವಿಟ್ಟರ್‌ನಲ್ಲಿ ಟ್ವಿಟ್ ಮಾಡಿದ್ದಾರೆ.
ಗೆಜೆಟ್ ವೆಬ್‌ಸೈಟ್‌ನ ತಂತ್ರಜ್ಞಾನ ತಜ್ಞ ರಿಚ್ ಟ್ರೆನ್‌ಹೊಮ್ ಮಾತನಾಡಿ, ಇತ್ತಿಚೆಗೆ ಆಪಲ್ ಕಂಪೆನಿಯ ಉತ್ಪನ್ನಗಳಲ್ಲಿ ಹಲವಾರು ಸಮಸ್ಯೆಗಳು ಎದುರಾಗಿವೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಸಂದೇಶಗಳಿಂದ ಐಫೋನ್ ಗ್ರಾಹಕರ ಅಕ್ರೋಶವನ್ನು ತಿಳಿಯಬಹುದಾಗಿದೆ ಎಂದು ಹೇಳಿದ್ದಾರೆ.