ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬ್ಯಾಂಕ್ ಆಫ್ ಇಂಡಿಯಾ ಠೇವಣಿ ಬಡ್ಡಿ ದರ ಹೆಚ್ಚಳ (Bank of India | Basis points | Fixed deposit rates)
Bookmark and Share Feedback Print
 
ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ, ಸ್ಥಿರ ಠೇವಣಿ ಬಡ್ಡಿ ದರಗಳಲ್ಲಿ 75ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಘೋಷಿಸಿದ್ದು,ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್ , ಎರಡನೇ ತ್ರೈಮಾಸಿಕ ಪರಿಷ್ಕರಣ ಸಭೆಯಲ್ಲಿ ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಏರಿಕೆ ಘೋಷಿಸಿದೆ.

ಒಂದು ಕೋಟಿಗಿಂತ ಕಡಿಮೆಯಿರುವ ಹಾಗೂ 91-179 ದಿನಗಳವರೆಗಿನ ಸ್ಥಿರ ಠೇವಣಿಗೆ ಶೇ.6.25ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ಆಫ್ ಇಂಡಿಯಾ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

180-269 ದಿನಗಳವರೆಗಿನ ಸ್ಥಿರ ಠೇವಣಿಯ ಬಡ್ಡಿ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ.270-364 ದಿನಗಳವರೆಗಿನ ಸ್ಥಿರ ಠೇವಣಿಗೆ ಶೇ.6.75 ಬಡ್ಡಿ ದರ ವಿಧಿಸಲಿದೆ.

ಎರಡು ವರ್ಷಗಳವರೆಗಿನ ಸ್ಥಿರ ಠೇವಣಿಯ ಬಡ್ಡಿ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳ ಘೋಷಿಸಿದ್ದು ಶೇ.7.5ಕ್ಕೆ ನಿಗದಿಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ