ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫೋರ್ಬ್ಸ್ ಪ್ರಭಾವಶಾಲಿ ಪಟ್ಟಿ: ಒಬಾಮಾ ಹಿಂದಿಕ್ಕಿದ ಜಿಂಟಾವೊ (Sonia Gandhi | Manmohan Singh | Ratan Tata | Forbes | Mukesh Ambani)
ಫೋರ್ಬ್ಸ್ ಪ್ರಭಾವಶಾಲಿ ಪಟ್ಟಿ: ಒಬಾಮಾ ಹಿಂದಿಕ್ಕಿದ ಜಿಂಟಾವೊ
ಬೊಸ್ಟೊನ್, ಗುರುವಾರ, 4 ನವೆಂಬರ್ 2010( 15:58 IST )
PTI
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಟಾಟಾ ಸನ್ಸ್ ಮುಖ್ಯಸ್ಥ ರತನ್ ಟಾಟಾ ಸೇರಿದಂತೆ ಐವರು ಭಾರತೀಯರು, ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ ಎಂದು ಫೋರ್ಬ್ಸ್ ಮೂಲಗಳು ತಿಳಿಸಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಮಿತ್ತಲ್ ಕೂಡಾ ಪ್ರಸಕ್ತ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಚೀನಾದ ಅಧ್ಯಕ್ಷ ಹು ಜಿಂಟಾವೊ, 2010ರ ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಜಗತ್ತಿನ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಎರಡನೇ ಸ್ಥಾನದಲ್ಲಿದ್ದಾರೆ ಎಂದು ಬಿಜಿನೆಸ್ ಮ್ಯಾಗ್‌ಜಿನ್ ಫೋರ್ಬ್ಸ್ ಪ್ರಕಟಿಸಿದೆ.