ಸರಬರಾಜು ಪ್ರಕ್ರಿಯೆ ಚುರುಕುಗೊಂಡ ಹಿನ್ನೆಲೆಯಲ್ಲಿ,ತರಕಾರಿ, ಆಲೂಗಡ್ಡೆ, ಈರುಳ್ಳಿ ದರಗಳಲ್ಲಿ ಇಳಿಕೆಯಾಗಿದ್ದರಿಂದ, ಅಕ್ಟೋಬರ್ 23ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.12.85ಕ್ಕೆ ಇಳಿಕೆಯಾಗಿದೆ.
ಕಳೆದ ವಾರ ಅಕ್ಟೋಬರ್ 16ಕ್ಕೆ ವಾರಂತ್ಯಗೊಂಡಂತೆ, ಆಹಾರ ಹಣದುಬ್ಬರ ದರ ಶೇ.13.75ಕ್ಕೆ ಇಳಿಕೆಯಾಗಿತ್ತು
ವಾರ್ಷಿಕ ಆಧಾರದನ್ವಯ ಆಲೂಗಡ್ಡೆ ದರದಲ್ಲಿ ಶೇ.51.22 ರಷ್ಟು ಕುಸಿತ ಕಂಡಿದೆ. ತರಕಾರಿ ದರಗಳಲ್ಲಿ ಶೇ.4.20ರಷ್ಟು ದರ ಕುಸಿತವಾಗಿದೆ. ಈರುಳ್ಳಿ ದರದಲ್ಲಿ ಕೂಡಾ ಶೇ.0.13ರಷ್ಟು ಕುಸಿತವಾಗಿದೆ.
ಏತನ್ಮಧ್ಯೆ, ಅಗತ್ಯ ವಸ್ತುಗಳಾದ ದ್ವಿದಳ ಧಾನ್ಯ, ಹಾಲು ಮತ್ತು ಹಣ್ಣು ದರಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಕಳೆದ ವಾರಕ್ಕೆ ಹೋಲಿಸಿದಲ್ಲಿ ಇತರ ಆಹಾರ ವಸ್ತುಗಳಾದ, ಹಾಲು ದರದಲ್ಲಿ ಶೇ.21.72ರಷ್ಟು ಏರಿಕೆ ಕಂಡಿದೆ. ಹಣ್ಣುಗಳ ದರ ಶೇ.16.03 ರಷ್ಟು ಏರಿಕೆಯಾಗಿದೆ.
ವಾರ್ಷಿಕ ಆಧಾರದನ್ವಯ ಮೊಟ್ಟೆ ಮಾಂಸ ಮತ್ತು ಮೀನು ದರಗಳಲ್ಲಿ ಶೇ.28.85 ರಷ್ಟು ಇಳಿಕೆಯಾಗಿದೆ.