ಬಿಎಸ್ಎನ್ಎಲ್: ಅಕ್ಟೋಬರ್‌ನಲ್ಲಿ 23 ಲಕ್ಷ ಗ್ರಾಹಕರ ಸೇರ್ಪಡೆ
ನವದೆಹಲಿ, ಗುರುವಾರ, 4 ನವೆಂಬರ್ 2010( 20:11 IST )
ಖಾಸಗಿ ಟೆಲಿಕಾಂ ಕಂಪೆನಿಗಳ ಸ್ಪರ್ಧೆಯ ಮಧ್ಯೆಯು ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್, ಅಕ್ಟೋಬರ್ ತಿಂಗಳ ಅವಧಿಯಲ್ಲಿ 2.5ಮಿಲಿಯನ್ ಮೊಬೈಲ್ ಗ್ರಾಹಕರನ್ನು ಸೇರ್ಪಡೆಗೊಳಿಸಿದೆ.
ಖಾಸಗಿ ಕಂಪೆನಿಗಳ ಸ್ಪರ್ಧೆಯಿಂದಾಗಿ ಗ್ರಾಹಕರನ್ನು ಸೇರ್ಪಡೆಗೊಳಿಸುವಲ್ಲಿ ಹಿನ್ನೆಡೆ ಅನುಭವಿಸಿದ್ದ ಬಿಎಸ್‌ಎನ್‌ಎಲ್,ಕಳೆದ ಅಗಸ್ಟ್ ತಿಂಗಳಿನಿಂದ ಸತತ ಅಕ್ಟೋಬರ್‌ವರೆಗೆ ಪ್ರತಿ ತಿಂಗಳು ಎರಡು ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರದ ಟೆಲಿಕಾಂ ಖಾತೆಯ ರಾಜ್ಯ ಸಚಿವ ಸಚಿನ್ ಪೈಲಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್ ಸಂಸ್ಥೆ ನೂತನ ದರಗಳನ್ನು ಜಾರಿಗೊಳಿಸಿದ್ದರಿಂದ, ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. 'ಪ್ಯಾರಿ ಜೋಡಿ'ಯೋಜನೆಯಡಿಯಲ್ಲಿ ಸ್ಥಿರ ದೂರವಾಣಿ ಸಂಪರ್ಕ ಪಡೆದವರಿಗೆ ಉಚಿತ ಮೊಬೈಲ್ ಹ್ಯಾಂಡ್‌ಸೆಟ್ ನೀಡುವ ಸಂಸ್ಥೆಯ ಯೋಜನೆ ಜನಪ್ರಿಯವಾಗಿದೆ ಎಂದು ಸಚಿವ ಪೈಲಟ್ ಹೇಳಿದ್ದಾರೆ.
ಕಳೆದ ಜುಲೈ ತಿಂಗಳ ಅವಧಿಯಲ್ಲಿ ಕೇವಲ 1.08 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದ ಬಿಎಸ್‌ಎನ್‌ಎಲ್, ಅಗಸ್ಟ್ ತಿಂಗಳ ಅವಧಿಯಲ್ಲಿ 2.3 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದೆ. ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ 2.3 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಲಾಗಿದೆ. ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆ ಒಟ್ಟು 81 ಮಿಲಿಯನ್ ಗ್ರಾಹಕರನ್ನು ಹೊಂದಿದೆ.