ಎಲ್ಲಾ ಮಾದರಿಯ ಫಿಯೆಟ್ ಕಾರುಗಳಿಗೆ ಹಣಕಾಸಿನ ನೆರವು ಒದಗಿಸುವುದಾಗಿ ದೇಶದ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಯಾಗಿರುವ ಟಾಟಾದ ಹಣಕಾಸು ವಿಭಾಗ ತಿಳಿಸಿದೆ.
ಫಿಯೆಟ್ ಕಾರುಗಳ ಖರೀದಿಗೆ ಟಾಟಾ 2009ರಿಂದ ಹಣಕಾಸಿನ ನೆರವು ನೀಡುತ್ತಿದ್ದು, ಹೆಚ್ಚುವರಿ ಹಣಕಾಸಿನ ನೆರವನ್ನು ಉಳಿದ ಮಾದರಿಗಳಿಗೂ ವಿಸ್ತರಿಸಲಾಗಿದೆ ಎಂದು ಕಂಪನಿ ಹೇಳಿದೆ.
ಟಾಟಾ ಈಗಾಗಲೇ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ವಿದೇಶಗಳಲ್ಲಿಯೂ ಕಡಿಮೆ ಬೆಲೆಯ ಕಾರುಗಳನ್ನು ಮಾರುಕಟ್ಟೆಗೆ ತರಲು ಸಿದ್ದತೆ ನಡೆಸಲಾಗಿದೆ. ಅದೇ ರೀತಿ ಫಿಯೆಟ್ ಕಾರುಗಳ ಖರೀದಿಗೆ ಆರ್ಥಿಕ ನೆರವು ನೀಡಲು ಕಂಪನಿ ಮುಂದಾಗಿದೆ ಎಂದು ಟಾಟಾ ಪ್ರಕಟಣೆಯಲ್ಲಿ ತಿಳಿಸಿದೆ.