ಭಾರತಕ್ಕೆ ಅಮೆರಿಕ ಅದ್ಯಕ್ಷ ಬರಾಕ್ ಒಬಾಮಾ ಭೇಡಿ ನೀಡಿದ ಹಿನ್ನೆಲೆಯಲ್ಲಿ, ಅಮೆರಿಕ ಕಂಪೆನಿಗಳೊಂದಿಗೆ ಭಾರತ ಪ್ರಮುಖ ಒಪ್ಪಂದಗಳಿಗೆ ಹಸ್ತಾಕ್ಷರ ಹಾಕುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಕಂಪೆನಿಗಳೊಂದಿಗೆ ಅಮೆರಿಕ ಹಲವಾರು ಒಪ್ಪಂದಗಳಿಗೆ ಸಹಿಹಾಕಲಾಗುವುದು ಎಂದು ಅಮೆರಿಕದ ಅಂತಾರಾಷ್ಟ್ರೀಯ ಭದ್ರತಾ ಅಧಿಕಾರಿಯಾದ ಮೈಕ್ ಫ್ರೊಮೆನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತ 126 ಯುದ್ಧ ವಿಮಾನಗಳಿಗೆ 11 ಬಿಲಿಯನ್ ಡಾಲರ್ ಗುತ್ತಿಗೆಯನ್ನು ಅಮೆರಿಕದ ಕಂಪೆನಿಯಾದ ಬೊಯಿಂಗ್ ಆಂಡ್ ಲಾಕ್‌ಹೀಡ್ ಮಾರ್ಟಿನ್ ಕಾರ್ಪೋರೇಶನ್‌ಗೆ ನೀಡಲು ನಿರ್ಧರಿಸಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಅಮೆರಿಕದಲ್ಲಿ ನಡೆದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷ ಸೋಲನುಭವಿಸಿದ ಕೇವಲ ಮೂರು ದಿನಗಳ ನಂತರ ಒಬಾಮಾ, ಭಾರತ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.