ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 'ಫೇಸ್‌ಬುಕ್' ಸೇರ್ಪಡೆಯಾದ ಬ್ರಿಟನ್ ರಾಜಮನೆತನ (Facebook | British Royal Family | Twitter | YouTube)
Bookmark and Share Feedback Print
 
ಸಾಮಾಜಿಕ ನೆಟ್‌ವರ್ಕ್ ತಾಣವಾದ ವೆಬ್‌ಸೈಟ್‌‌ನಲ್ಲಿ ಇದೀಗ ಬ್ರಿಟನ್ ರಾಜಮನೆತನದವರನ್ನು ಸಂಪರ್ಕಿಸಬಹುದಾಗಿದೆ.

ಈಗಾಗಲೇ ಮೈಕ್ರೋ-ಬ್ಲಾಗಿಂಗ್ ಟ್ವಿಟ್ಟರ್ ಮತ್ತು ಯೂ-ಟ್ಯೂಬ್ ಬಳಸುತ್ತಿರುವ ಬ್ರಿಟನ್ ರಾಜಮನೆತನದ ಸದಸ್ಯರು, ಫೇಸ್‌ಬುಕ್‌ನಲ್ಲಿ ತಾಣದಲ್ಲಿ ಲಭ್ಯವಾಗಿದ್ದಾರೆ.

'ಬ್ರಿಟಿಷ್ ಮೊನಾರ್ಚಿ' ಪೇಜ್‌ನಲ್ಲಿ ಭಾವಚಿತ್ರಗಳು, ನೂತನ ವಿಡಿಯೋಗಳು ಮತ್ತು ಕ್ವಿನ್ ಎಲಿಜಾಬೆತ್(ಎರಡು), ಪ್ರಿನ್ಸ್ ಚಾರ್ಲ್ಸ್‌ ಮತ್ತು ಅವರ ಪುತ್ರರಾದ ಪ್ರಿನ್ಸ್ ವಿಲಿಯಂ ಮತ್ತು ಹ್ಯಾರಿ ವಿವರಗಳು ಲಭ್ಯವಾಗಿಸಲಾಗಿದೆ.

ಫೇಸ್‌ಬುಕ್‌ನಲ್ಲಿರುವ ಪೇಜ್‌ನಲ್ಲಿ ವೈಯಕ್ತಿಕ ವಿವರಗಳನ್ನು ಹೊಂದಿಲ್ಲ. ಆದರೆ, ರಾಜಮನೆತನದ ಸೇವೆಗಳು ಹಾಗೂ ಪ್ರಸಕ್ತ ವಿದ್ಯಾಮಾನಗಳು ಮತ್ತು ಸುದ್ದಿಗಳನ್ನು ಅಪ್‌ಡೇಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 2009ರ ಅವಧಿಯಲ್ಲಿ ಟ್ವಿಟ್ಟರ್‌ನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದ ಬ್ರಿಟನ್ ರಾಜಮನೆತನ,ಇದೀಗ ಫೇಸ್‌ಬುಕ್‌ನಲ್ಲಿ ತಮ್ಮ ವಿವರಗಳನ್ನು ಬಹಿರಂಗಪಡಿಸಿದೆ.

2004ರಲ್ಲಿ ಮಾರ್ಕ್ ಝುಕರ್‌ಬೆರ್ಗ್ ಫೇಸ್‌ಬುಕ್ ಆರಂಭಿಸಿದ ನಂತರ, ಜಾಗತಿಕ ಅಂತರ್ಜಾಲ ತಾಣದಲ್ಲಿ ಮುಂಚೂಣಿಯ ಸ್ಥಾನವನ್ನು ಪಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ