ತಂತ್ರಜ್ಞಾನ ಕ್ಷೇತ್ರದ ಪ್ರಭಾವಶಾಲಿ ವ್ಯಕ್ತಿ ಬಿಲ್ ಗೇಟ್ಸ್:ಪೋರ್ಬ್ಸ್
ಲಂಡನ್, ಸೋಮವಾರ, 8 ನವೆಂಬರ್ 2010( 13:49 IST )
PTI
ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥ ಬಿಲ್ ಗೇಟ್ಸ್ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಫೋರ್ಬ್ಸ್ ಮೂಲಗಳು ತಿಳಿಸಿವೆ.
ಮೈಕ್ರೋಸಾಫ್ಟ್ ಸಂಸ್ಥಾಪಕರಾದ ಗೇಟ್ಸ್, ರುಪರ್ಟ್ ಮುರ್ಡೊಚ್, ಹಿಲೆರಿ ಕ್ಲಿಂಟನ್ ಮತ್ತು ಸ್ಟಿವ್ ಜಾಬ್ಸ್ ಅವರನ್ನು ಹಿಂದಿಕ್ಕಿ, ವಿಶ್ವದ 10ನೇ ಪ್ರಭಾವಶಾಲಿ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿಯಲ್ಲಿ ಪ್ರಕಟಿಸಿದೆ.
ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜಾಬ್ಸ್, ಕೆಲವೇ ವರ್ಷಗಳ ಅವಧಿಯಲ್ಲಿ ಬಹುಮಿಲಿಯನ್ ಡಾಲರ್ ವಹಿವಾಟು ವಿಸ್ತರಿಸಿರುವದಲ್ಲದೇ ಇತ್ತಿಚೆಗೆ ಬಿಡುಗಡೆಗೊಳಿಸಲಾದ ಜನಪ್ರಿಯ ಐಫೋನ್ ಮತ್ತು ಐಪಾಡ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಫೋರ್ಬ್ಸ್ ಪರಿಗಣಿಸಿದೆ.
ಗೂಗಲ್‌ನ ಸಹ -ಸಂಸ್ಥಾಪಕರಾದ ಲಾರಿ ಪೇಜ್ ಮತ್ತು ಸೆರ್ಗೆ ಬ್ರಿನ್, ಫೋರ್ಬ್ಸ್ ಪ್ರಭಾವಿಶಾಲಿಗಳ ಪಟ್ಟಿಯಲ್ಲಿ 22ನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಸಾಮಾಜಿಕ ನೆಟ್‌ವರ್ಕ್ ತಾಣವಾದ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕೆರ್‌ಬರ್ಗ್ ಫೋರ್ಬ್ಸ್ ಪಟ್ಟಿಯಲ್ಲಿ 40ನೇ ಸ್ಥಾನವನ್ನು ಪಡೆದಿದ್ದಾರೆ.