ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪಿಯಾಜಿವೊ ಕಂಪೆನಿಯಿಂದ 3-ಆಸನಗಳುಳ್ಳ ಕಾರು ಮಾರುಕಟ್ಟೆಗೆ (Tata Motors Nano | Piaggio India | General motors)
Bookmark and Share Feedback Print
 
ದೇಶದ ಸಣ್ಣ ಕಾರುಗಳ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌‌ನ ನ್ಯಾನೋ ಕಾರಿಗೆ ಹೆಚ್ಚಿದ ಬೇಡಿಕೆಯಿಂದ ಉತ್ತೇಜಿತವಾದ ಇಟಲಿಯನ್ ಕಾರು ತಯಾರಿಕೆ ಕಂಪೆನಿ ಪಿಯಾಜಿವೊ, ಮುಂದಿನ ಮೂರು ವರ್ಷಗಳಲ್ಲಿ 3 ಆಸನಗಳುಳ್ಳ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಈಗಾಗಲೇ ಇತರ ಕಾರು ತಯಾರಿಕೆ ಕಂಪೆನಿಗಳಾದ ಹುಂಡೈ ಮೋಟಾರ್, ಜನರಲ್ ಮೋಟಾರ್ಸ್ ಕೂಡಾ ಸಣ್ಣ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧತೆ ನಡೆಸಿವೆ. ಫ್ರೆಂಚ್‌ ಕಾರು ತಯಾರಿಕೆ ಸಂಸ್ಥೆ ರೆನು ಭಾರತದ ಬಜಾಜ್ ಅಟೋ ಕಂಪೆನಿಯ ಜಂಟಿ ಸಹಭಾಗಿತ್ವದಲ್ಲಿ ಕಡಿಮೆ ದರದ ಕಾರು ನಿರ್ಮಾಣದಲ್ಲಿ ತೊಡಗಿದೆ.

ವಿಶ್ವದಾದ್ಯಂತ ಸ್ಕೂಟರ್ ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಪಿಯಾಜಿವೊ, ಇದೀಗ ಸಣ್ಣ ಕಾರುಗಳ ತಯಾರಿಕೆಯಲ್ಲಿ ತೊಡಗಿದ್ದು, ಶೀಘ್ರದಲ್ಲಿ ಭಾರತ ವಿಯಟ್ನಾಂ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ.

ಪಿಯಾಜಿವೊ ಕಂಪೆನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕರಾದ ರವಿ ಚೋಪ್ರಾ ಮಾತನಾಡಿ, ವೇಗವಾಗಿ ಚೇತರಿಕೆ ಕಾಣುತ್ತಿರುವ ಉದಯೋನ್ಮುಖ ಭಾರತ ಮತ್ತು ವಿಯಟ್ನಾಂ ಮಾರುಕಟ್ಟೆಗಳನ್ನು ಗಮನದಲ್ಲಿರಿಸಿಕೊಂಡು ಸಣ್ಣ ಕಾರುಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಿಯಾಜಿವೊ, ಕಂಪೆನಿಯ ಸಣ್ಣಕಾರುಗಳು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಅಂದಾಜು 1.5 ಲಕ್ಷ ರೂಪಾಯಿಗಳ ಮೌಲ್ಯವನ್ನು ನಿಗದಿಪಡಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ