ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕದ ಹುದ್ದೆಗಳನ್ನು ಕಸಿದುಕೊಳ್ಳಲು ಬಯಸುವುದಿಲ್ಲ :ಪ್ರಧಾನಿ (Barack Obama | Manmohan Singh | America)
Bookmark and Share Feedback Print
 
ಅಮೆರಿಕದ ನಾಗರಿಕರು ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದು, ಭಾರತೊಂದಿಗಿನ ಒಪ್ಪಂದದಿಂದ 50 ಸಾವಿರ ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹೇಳಿಕೆಯ ಮಧ್ಯೆಯು, ಭಾರತ ಅಮೆರಿಕದ ಹುದ್ದೆಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಭಾರತ, ಅಮೆರಿಕ ಜನತೆಯ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿಲ್ಲ. ಹೊರಗುತ್ತಿಗೆಯಿಂದಾಗಿ ಉತ್ಪಾದನಾ ಕ್ಷಮತೆ ಮತ್ತು ಅಮೆರಿಕದ ಉತ್ಪಾದಕತೆಯಲ್ಲಿ ಹೆಚ್ಚಳವಾಗಲು ನೆರವಾಗುತ್ತದೆ ಎಂದು ಹೈದ್ರಾಬಾದ್‌ ಹೌಸ್‌ನಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ

ಉಭಯ ನಾಯಕರು ಎರಡು ದೇಶಗಳ ತಂತ್ರಜ್ಞಾನ, ಸಹಕಾರ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳ ಬಾಂಧವ್ಯ ವೃದ್ಧಿಗೆ ಬದ್ಧರಾಗಿದ್ದಾರೆ.ವಹಿವಾಟು ಮತ್ತು ಹೂಡಿಕೆಯಲ್ಲಿ ಹೆಚ್ಚಳದಿಂದಾಗಿ ಆಯಾ ರಾಷ್ಟ್ರಗಳಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಜನತೆಯ ಜೀವನಮಟ್ಟ ಸುಧಾರಣೆಯಗಾಲು ಸಹಕಾರಿಯಾಗುತ್ತದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ