ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಡೊಕೊಮೊ, 3ಜಿ ಮೊಬೈಲ್ ಸೇವೆಗಳಿಗಾಗಿ ಪೋಸ್ಟ್-ಪ್ರೀ ಪೇಡ್ ವಿಭಿನ್ನ ರೀತಿಯ ದರಗಳನ್ನು ಘೋಷಿಸಿದೆ. 3ಜಿ ಮೋಬೈಲ್ ಸೇವಾ ದರ ಮಾಸಿಕವಾಗಿ ಪ್ರತಿ ಸೆಕೆಂಡ್‌ಗೆ 0.66 ಪೈಸೆಯಂತೆ 350 ರೂಪಾಯಿಗಳಿಂದ 2000 ರೂಪಾಯಿಗಳಿಗೆ ನಿಗದಿಪಡಿಸಿದೆ.
ಉದಾಹರಣೆಗೆ, ಮಾಸಿಕ ದರ 2000 ರೂಪಾಯಿಗಳ ಪ್ಯಾಕೇಜ್‌ನಲ್ಲಿ, ಬಳಕೆದಾರರು 5000 ನಿಮಿಷಗಳ ವೈಸ್ ಕಾಲ್, 2ಜಿಬಿ ಡಟಾ ಯುಸೆಜ್ ಸೌಲಭ್ಯವನ್ನು ಪಡೆಯುತ್ತಾರೆ.
ದೀಪಾವಳಿ ಹಬ್ಬದ ಅಂಗವಾಗಿ ಕಂಪೆನಿ ದೇಶಧ ಒಂಬತ್ತು ವಲಯಗಳಲ್ಲಿ 3ಜಿ ಸೇವೆಗಳನ್ನು ಆರಂಭಿಸಿದೆ. ಕರ್ನಾಟಕ, ಕೇರಳ, ಇತರೆ ಮಹಾರಾಷ್ಟ್ರ, ಗುಜರಾತ್ ರಾಜಸ್ಥಾನ, ಪಂಜಾಬ್, ಹರಿಯಾಣಾ, ಮಧ್ಯಪ್ರದೇಶ ಮತ್ತು ಚತ್ತಿಸ್‌ಗಢ್ ಹಾಗೂ ಉತ್ತರಪ್ರದೇಶ(ಪಶ್ಚಿಮ) ರಾಜ್ಯಗಳಲ್ಲಿ ಸೇವೆಗಳನ್ನು ವಿಸ್ತರಿಸಿದೆ ಎಂದು ಮೂಲಗಳೂ ತಿಳಿಸಿವೆ.
ಇತರ ಟೆಲಿಕಾಂ ಕಂಪೆನಿಗಳಾದ ಭಾರ್ತಿ ಮತ್ತು ವೊಡಾಫೋನ್ ಮುಂದಿನ ಕೆಲ ತಿಂಗಳುಗಳಲ್ಲಿ 3ಜಿ ಸೇವೆಗಳನ್ನು ಆರಂಭಿಸಲಿವೆ. ಟಾಟಾ ಡೊಕೊಮೊ ಪ್ರತಿ ಪಲ್ಸ್ ಸೆಕೆಂಡ್‌ಗೆ ದರವನ್ನು ನಿಗದಿಪಡಿಸಿರುವ ಹಿನ್ನೆಲೆಯಲ್ಲಿ, ಇತರ ಕಂಪೆನಿಗಳು ಕೂಡಾ ಹಿಂಬಾಲಿಸುವ ಅನಿವಾರ್ಯತೆ ಎದುರಾಗಿದೆ.
3ಜಿ ಸ್ಪೆಕ್ಟ್ರಂ ಹರಾಜು ಗರಿಷ್ಠ ಮಟ್ಟಕ್ಕೆ ತಲುಪಿದ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪೆನಿಗಳು,3ಜಿ ಮೊಬೈಲ್ ಸೇವಾ ದರಗಳು ಅಗ್ಗವಾಗಿರುವುದಿಲ್ಲ ಎಂದು ಈಗಾಗಲೇ ಹೇಳಿಕೆ ನೀಡಿವೆ.
ಅದರಂತೆ, ಕಂಪ್ಯೂಟರ್ಸ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ 3ಜಿ ಡಟಾ ಸೇವೆಗಳಿಗಾಗಿ ಟಾಟಾ ಡೊಕೊಮೊ, 21.1 ಎಂಬಿಪಿಎಸ್ ಸ್ಪೀಡ್ ವೇಗದ 15 ಜಿಬಿ ಡಟಾ ಯುಸೆಜ್ ಬಳಕೆಗಾಗಿ 2 ಸಾವಿರ ರೂಪಾಯಿಗಳ ಪ್ಯಾಕೇಜ್ ಘೋಷಿಸಿದೆ.
ಏತನ್ಮಧ್ಯೆ, ಬಳಕೆದಾರನಿಗೆ 15ಜಿಬಿಯ ನಂತರವು ಯುಸೆಜ್ ಅಗತ್ಯವಾದಲ್ಲಿ ಉಚಿತವಾಗಿ ನೀಡಲಾಗುತ್ತದೆ. ಆದರೆ, 256ಕೆಬಿಪಿಎಸ್ ಸ್ಪೀಡ್ ವೇಗವನ್ನು ಅವಲಂಬಿಸಬೇಕಾಗುತ್ತದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಟಾ ಡೊಕೊಮೊ ಕಂಪೆನಿ, ಪ್ರಸ್ತುತ ಮೊಬೈಲ್ ಮತ್ತು ಸ್ಥಿರ ಬಳಕೆದಾರರ ಸಂಖ್ಯೆ 80 ಮಿಲಿಯನ್‌ಗಳಿಗೆ ತಲುಪಿದೆ. 3ಜಿ ಮೊಬೈಲ್ ಮತ್ತು ಡಟಾ ಸೇವೆಗಳಿಂದ ಹೆಚ್ಚಿನ ಆದಾಯವಾಗುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.