ಚಿನ್ನದ ಆಭರಣಗಳ ತಯಾರಕರು ಮತ್ತು ಹೂಡಿಕೆದಾರರಿಂದ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿ ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಚಿನ್ನ ಪ್ರತಿ 10 ಗ್ರಾಂಗೆ 265 ರೂಪಾಯಿಗಳ ಏರಿಕೆಯಾಗಿ 20,600 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 1,800 ರೂಪಾಯಿಗಳ ಏರಿಕೆಯಾಗಿ 41,700 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್ಗೆ 1,413.47 ಡಾಲರ್ಗಳಿಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಕೂಡಾ ಶೇ.1.2ರಷ್ಟು ಏರಿಕೆಯಾಗಿ ಪ್ರತಿ ಔನ್ಸ್ಗೆ 28.07 ಡಾಲರ್ಗಳಿಗೆ ತಲುಪಿದೆ.