ಭಾರತೀಯರಲ್ಲಿ 18 ಸಾವಿರ ಟನ್ ಚಿನ್ನದ ಸಂಪತ್ತು:ಡಬ್ಲ್ಯುಜಿಸಿ
ಬೆಂಗಳೂರು, ಬುಧವಾರ, 10 ನವೆಂಬರ್ 2010( 17:50 IST )
ಭಾರತದಲ್ಲಿ ಒಟ್ಟು 18 ಸಾವಿರ ಟನ್ ಚಿನ್ನವನ್ನು ಹೊಂದಿದ್ದು,ಇಂದಿನ ದರಕ್ಕೆ ಹೋಲಿಸಿದಲ್ಲಿ ಸುಮಾರು 800 ಬಿಲಿಯನ್ ಡಾಲರ್‌ಗಳಾಗಲಿದೆ. ಜಗತ್ತಿನಲ್ಲಿರುವ ಚಿನ್ನದ ಸಂಗ್ರಹದಲ್ಲಿ ಶೇ.11ರಷ್ಟು ಪಾಲನ್ನು ಭಾರತ ಹೊಂದಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಬಹಿರಂಗಪಡಿಸಿದೆ.
ಇಂಡಿಯಾ: ಹರ್ಟ್ ಆಫ್ ಗೋಲ್ಡ್' ಎನ್ನುವ ಶಿರ್ಷಿಕೆಯಡಿ ಅಧ್ಯಯನ ನಡೆಸಿದ ವರ್ಲ್ಡ್ ಗೋಲ್ಡ್ ಕೌನ್ಸಿಲ್,ದೇಶದ ಬೃಹತ್ ಚಿನ್ನದ ಸಂಗ್ರಹದಿಂದಾಗಿ, ದೇಶದ ಪ್ರತಿಯೊಬ್ಬನಿಗೆ ಅರ್ಧ ಔನ್ಸ್ ಚಿನ್ನದ ಮಾಲೀಕತ್ವವನ್ನು ಹೊಂದಿದಂತಾಗಿದೆ. ಆದರೆ, ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಚಿನ್ನದ ವ್ಯಾಮೋಹ ಹೆಚ್ಚು ಎಂದು ವರದಿಯಲ್ಲಿ ಬಹಿರಂಗಪಡಿಸಿದೆ.
ಇಂಡಿಯನ್ ಗೋಲ್ಡ್ ಮಾರ್ಕೆಟ್ ಕುರಿತಂತೆ ಮೊದಲ ಬಾರಿಗೆ ಅಧ್ಯಯನ ವರದಿಯನ್ನು ಬಹಿರಂಗಪಡಿಸಿದ್ದು,ಎರಡನೇ ವಾರ್ಷಿಕ ವರದಿಯನ್ನು 2011ರಲ್ಲಿ ಬಿಡುಗಡೆ ಮಾಡಲಿದ್ದು, ಭಾರತದಲ್ಲಿ ಮುಂದಿನ ಕೆಲ ದಶಕಗಳಲ್ಲಿ ಚಿನ್ನದ ಬೇಡಿಕೆ ಕುರಿತಂತೆ ಅಧ್ಯಯನ ನಡೆಸುತ್ತಿದೆ.