ದೇಶದ ವಾಹನೋದ್ಯಮ ಕ್ಷೇತ್ರ ಸತತ ನಾಲ್ಕನೇ ತಿಂಗಳ ಅವಧಿಗೆ ಚೇತರಿಕೆ ಕಂಡಿದ್ದು, ಕಳೆದ ತಿಂಗಳ ಅವಧಿಯಲ್ಲಿ 14,60,655 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಬ್ಬದ ಬೇಡಿಕೆ ಹಾಗೂ ಮಾರುಕಟ್ಟೆಗೆ ಆಗಮಿಸಿದ ನೂತನ ಮಾಡೆಲ್ ವಾಹನಗಳು ಮತ್ತು ಆರ್ಥಿಕತೆ ಚೇತರಿಕೆಯ ಹಿನ್ನೆಲೆಯಲ್ಲಿ ವಾಹನಗಳ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಸೂಸೈಟಿ ಆಫ್ ಇಂಡಿಯನ್ ಅಟೋಮೋಬೈಲ್ ಮ್ಯಾನುಫ್ಯಾಕ್ಚುರರ್ಸ್ (ಸಿಯಾಮ್) ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ 13,29,086 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ವಾಹನೋದ್ಯಮ ಕ್ಷೇತ್ರದ ಮೂಲಗಳು ತಿಳಿಸಿವೆ.
ಅಕ್ಟೋಬರ್ ತಿಂಗಳ ಅವಧಿಯಲ್ಲಿ ವಾಹನಗಳ ಮಾರಾಟದಲ್ಲಿ ಶೇ. 45.93ರಷ್ಟು ಏರಿಕೆಯಾಗಿ 10,00,953 ವಾಹನಗಳನ್ನು ಮಾರಾಟ ಮಾಡಲಾಗಿದೆ.
ಪ್ರಯಾಣಿಕ ಕಾರುಗಳ ಮಾರಾಟ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಶೇ.37.99ರಷ್ಟು ಏರಿಕೆಯಾಗಿ 1,82,992 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,32,615 ಕಾರುಗಳ ಮಾರಾಟ ಮಾಡಲಾಗಿತ್ತು.