ಸೋಯಾ ಆಹಾರ ಧಾನ್ಯಗಳಿಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ, ಅಕ್ಟೋಬರ್ ತಿಂಗಳ ರಫ್ತು ವಹಿವಾಟಿನಲ್ಲಿ ನಾಲ್ಕು ಲಕ್ಷ ಟನ್ ಸೋಯಾ ಧಾನ್ಯವನ್ನು ರಫ್ತು ಮಾಡಲಾಗಿದೆ.
ಕಳೆದ ತಿಂಗಳ ಅವಧಿಯಲ್ಲಿ 4,09,987 ಟನ್ ಸೋಯಾ ಧಾನ್ಯಗಳನ್ನು ರಫ್ತು ಮಾಡಲಾಗಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 2,18,247 ಟನ್ ರಫ್ತು ಮಾಡಲಾಗಿತ್ತು ಎಂದು ಸೋಯಾಬಿನ್ ಪ್ರೋಸೆರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ(ಸೋಪಾ) ಮೂಲಗಳು ತಿಳಿಸಿವೆ.
ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳವರೆಗಿನ ಅವಧಿಯಲ್ಲಿ 12,57,876 ಟನ್ ಸೋಯಾ ಧಾನ್ಯಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಸೋಯಾ ರಫ್ತು ವಹಿವಾಟಿನಲ್ಲಿ ಶೇ.48 ರಷ್ಟು ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸೋಯಾಬಿನ್ ದರದಲ್ಲಿ ಭಾರಿ ಏರಿಕೆಯಾಗಿದೆ. ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಸೋಯಾಬಿನ್ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಸೋಯಾ ರಫ್ತು ವಹಿವಾಟು ಸಂಸ್ಥೆಯ ರಾಜೇಶ್ ಅಗರ್‌ವಾಲ್ ತಿಳಿಸಿದ್ದಾರೆ.