ದೇಶದ ವಾಹನೋದ್ಯಮ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ, ದಕ್ಷಿಣ ಕೊರಿಯಾದ ಸಾಂಗ್‌ಯಾಂಗ್ ಕಂಪೆನಿಯನ್ನು 400-500 ಮಿಲಿಯನ್ ಡಾಲರ್ ಪಾವತಿಸಿ ಖರೀದಿಸಲಿದೆ ಎಂದು ದಕ್ಷಿಣ ಕೊರಿಯಾದಲ್ಲಿರುವ ಭಾರತೀಯ ರಾಯಭಾರಿ ಸ್ಕಂದ್ ಆರ್.ತಯಾಲ್ ಹೇಳಿದ್ದಾರೆ.
ಸಾಂಗ್‌ಯಾಂಗ್ ಕಂಪೆನಿಯನ್ನು ಖರೀದಿಸಲು, ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ ಆಸಕ್ತಿಯನ್ನು ವಹಿಸಿದ್ದು, ಮುಂಬರುವ ಕೆಲ ತಿಂಗಳುಗಳಲ್ಲಿ ಸ್ವಾಧೀನ ಪ್ರಕಿಯೆ ಆರಂಭವಾಗಲಿದೆ ಎಂದು ತಯಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಅಗಸ್ಟ್ ತಿಂಗಳ ಅವಧಿಯಲ್ಲಿ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ, ಸಾಂಗ್‌ಯಾಂಗ್ ಕಂಪೆನಿಯನ್ನು ಖರೀದಿಸುವ ಕುರಿತಂತೆ ಮಾತುಕತೆಯನ್ನು ಆರಂಭಿಸಿತ್ತು.ಮಹೀಂದ್ರಾ ಕಂಪೆನಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ವಿಸ್ತರಿಸಲು ಹಲವು ಯೋಜನೆಗಳನ್ನು ರೂಪಿಸಿದೆ.
ಚೀನಾದ ಕಾರು ತಯಾರಿಕೆ ಸಂಸ್ಥೆ ಶಾಂಘೈ ಅಟೋಮೋಟಿವ್ ಇಂಡಸ್ಟ್ರೀಸ್ ಕಾರ್ಪೋರೇಶನ್, ಸಾಂಗ್‌ಯಾಂಗ್ ಕಂಪೆನಿಯನ್ನು ಖರೀದಿಸಲು ಆಸಕ್ತಿ ತೋರಿಸಿತ್ತು. ಆದರೆ, ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಮಹೀಂದ್ರಾ ತೆಕ್ಕೆಗೆ ಬಂದಿದೆ.